ಮದ್ಯಪ್ರಾಚ್ಯ ವಲಯದಲ್ಲಿ ಪ್ರತಿಷ್ಠಿತ ಅಲ್ಯೂಮಿನಿಯಂ ಸಂಸ್ಕಾರಕ ಅಲ್ಯೂಮಿನಿಯಂ ಬಹರೇನ್ ಎರಡು ರಫ್ತು ಸಾಲ ಸೌಲಭ್ಯ ವ್ಯವಸ್ಥೆಗಳನ್ನು ಅಂತಿಮಗೊಳಿಸಿದೆ. ಇದು ಲೈನ್ 6 ವಿಸ್ತರಣಾ ಯೋಜನೆಯನ್ನು ಅಂತಿಮಗೊಳಿಸುವ ಇಂಗಿತ ಹೊಂದಿದೆ.
೧೩೬ ದಶಲಕ್ಷ ಡಾಲರ್ (೪೯೯.೫ ದಶಲಕ್ಷ ಬಹರೇನಿ ದಿರ್ಹಮ್‌ಗಳು) ಮತ್ತು ೯೦ ದಶಲಕ್ಷ ಯುರೋಗಳು (೩೭೬.೨ ದಶಲಕ್ಷ ದಿರ್ಹಮ್‌ಗಳು) ಮೌಲ್ಯದ ಈ ಸಾಲ ಸೌಲಭ್ಯಗಳನ್ನು ಲೈನ್ ೬ ವಿಸ್ತರಣಾ ಯೋಜನೆಗಾಗಿ ಬಳಸಲಾಗುವುದು. ಇದು ಅರಬಿಯಾ ಕೊಲ್ಲಿಯಲ್ಲಿ ಅತಿದೊಡ್ಡ ಬ್ರೌನ್ ಫೀಲ್ಡ್ಸ್ ಯೋಜನೆಗಳಲ್ಲೊಂದು.
ಎಕ್ಸ್‌ಪೋರ್ಟ್ ಡೆವೆಲಪ್ಮೆಂಟ್ ಕೆನಡಾ (ಇಡಿಸಿ) ೧೦ ವರ್ಷಗಳ ಕಾಲಾವಧಿಯ ೧೩೬ ದಶಲಕ್ಷ ಡಾಲರ್ ಸಾಲ ನೀಡಿದೆ. ಜಪಾನಿನ ಜೆಬಿಐಸಿ-ಎನ್‌ಇಎಕ್ಸ್‌ಐ ಬ್ಯಾಂಕ್ ೯೦ ದಶಲಕ್ಷ ಯೂರೊ ಸಾಲ ಸೌಲಭ್ಯ ನೀಡಿದೆ. ಇದನ್ನು ೧೦ ವರ್ಷ ಮತ್ತು ೬ ವರ್ಷ ಕಾಲಾವಧಿಯ ಎರಡು ಗುತ್ತಿಗೆ ಸಾಲಗಳನ್ನಾಗಿ ವಿಂಗಡಿಸಲಾಗಿದೆ.
ಲೈನ್ ೬ ಯೋಜನೆಯ ಸುರಕ್ಷಿತ ಆರಂಭದೊಂದಿಗೆ ನಾವು ಮಹತ್ವದ ಹೆಜ್ಜೆ ಮುಂದಿಡುತ್ತಿದ್ದೇವೆ ಎಂದು ಅಲ್ಬಾ ಅಧ್ಯಕ್ಷ ದೈಜ್ ಅಲ್ ಖಲೀಫಾ ತಿಳಿಸಿದರು.
ಸಿಸೆಲ್ ಪನಯಿಲ್ ಸೊಮನ್
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಇಂದ್‌ಸಮಾಚಾರ್ ಮಧ್ಯಪ್ರಾಚ್ಯ ವಲಯ
