ಅತ್ಮೀಯ ಸಾಗರೀಕರೇ..

ಕೊರೋನಾದಿಂದ ನಿರ್ಮಾಣವಾದ ಲಾಕ್ಡೌನ್ ಇಂದ ದುಡಿಮೆ ಇರದೆ ಜನರಿಗೆ ಆಹಾರದ ಸಮಸ್ಯೆ ತುಂಬ ಕಾಣಿಸುತ್ತಿದೆ. ಸರ್ಕಾರದಿಂದ ಪಡಿತರ ಚೀಟಿ ಇದ್ದವರಿಗೆ ಪಡಿತರವನ್ನು ನೀಡುತ್ತಿದ್ದಾರೆ. ಹಾಗೆಯೇ ಕೆಲವು ಮಹಾದಾನಿಗಳು ಸಹ ಸರ್ಕಾರದ ಸೌಲಭ್ಯ ಸಿಗದಿದ್ದವರಿಗೆ ತಮ್ಮ ಸಹಾಯಹಸ್ತವನ್ನು ನೀಡುತ್ತಿದ್ದಾರೆ. ಇನ್ನು ಕೆಲವರು ಯಾರನ್ನು ಕೇಳದೆ ಹಸಿವನ್ನು ನುಂಗಿ ಜೀವಿಸುತ್ತಿದ್ದಾರೆ ಅಂತವರ್ಯಾರಾದರು ನಿಮಗೆ ತಿಳಿದಿದ್ದರೆ ತಿಳಿಸಿ.
ಆಹಾರ ಇಲ್ಲದೇ ಹಸಿದವರನ್ನು ಸ್ವಲ್ಪವಾದರು ನೀಡಿ ಅವರ ಹಸಿವನ್ನು ನೀಗಿಸುವುದು ನಮ್ಮ ಇಚ್ಚೆಯೇ ಹೊರತು ಬೇರೆ ಉದ್ದೇಶವು ಇಲ್ಲ.
ದೇವರ ಸಾಕ್ಷಿಯಾಗಿ ನಿಜವಾಗಿಯು ನಿಮ್ಮಲ್ಲಿ ಊಟಕ್ಕೆ ಸಮಸ್ಯೆಯಾಗಿದ್ದರೆ, ಸರಕಾರಿ ಸೌಲಭ್ಯ ಇಲ್ಲದೇ , ಯಾವುದೇ ದಾನಿಗಳ ಸಹಾಯ ಪಡೆಯದೇ ಇದ್ದರೆ ನೀವು ಕರೆ ಮಾಡಿ ಅಥವ ಅಂತವರ ಮಾಹಿತಿ ಇದ್ದರೆ ನಮಗೆ ತಿಳಿಸಿ…
ಇದು ಸಾಗರ ತಾಲೂಕಿನವರಿಗೆ ಮಾತ್ರ ಯಾಕೆಂದರೆ ಹೊರ ತಾಲೂಕುಗಳಿಗೆ ತೆರಳಲು ಸಮಸ್ಯೆ ಇದೆ.
ನಮ್ಮ ಉದ್ದೇಶ ಹಸಿದವರಿಗೆ ಉಣಬಡಿಸುವುದೇ ವಿನಃ ಉಳ್ಳವರಿಗೆ ಅಲ್ಲ.
ನೀವು ಕೂಡ ಈ ಕಾರ್ಯದಲ್ಲಿ ಸೇರಿ ಹಸಿದವರ ಸೇವೆ ಮಾಡಬೇಕೆಂದರೆ ಮುಕ್ತವಾಗಿ ಬರಬಹುದು..
ನಿಮ್ಮ ಪ್ರಶಂಸೆಯ ನುಡಿಗಳು ಹಾಗೂ ಲೈಕ್ಗಳು ನಮಗೆ ಬೇಡ. ದಯಮಾಡಿ ಆತರದವರ ಮಾಹಿತಿ ಇದ್ದರೆ ನೀಡಿ. ಇದ್ದವರೇ ಬೇಡುವ ಹಾಗು ಕಸಿದು ಕೊಳ್ಳುವ ಪ್ರಪಂಚದಲ್ಲಿ ಇಲ್ಲದವರು ನರಳುತಿದ್ದಾರೆ ಅಂತವರನ್ನು ಮಾತ್ರ ನಮಗೆ ತಿಳಿಸಿ.
ಯಾವುದೇ ಜಾತಿ, ಧರ್ಮಗಳ ಬೇಧವಿಲ್ಲ.
ರಾಜಕೀಯದ ಘಮಲು ಕೂಡ ಇರುವುದಿಲ್ಲ.
ವಿಸೂ: ಫೋಟೋ, ವಿಡಿಯೋ ನಿಷಿದ್ಧ.
Ph No: 9986133373

By Goutham K S, Sagara
