(ಕೆ.ಅರುಣ್ ಪ್ರಸಾದ್)
(25-ಮಾಚ್೯ – 2020 ರಿಂದ 30 – ಮಾಚ್೯ – 2020)
ಸ್ವಾತಂತ್ರ ನಂತರದಲ್ಲಿ ಇಡೀ ದೇಶ ಇದೇ ಮೊದಲ ಬಾರಿ 21 ದಿನದ ಲಾಕ್ ಡೌನ್ ನಡೆದಿದೆ, ಇದರಿಂದ ದೇಶದ ಜನರ ಆರೋಗ್ಯಕ್ಕಾಗಿ ಕರೋನಾ ವೈರಸ್ ಸಾಮೂಹಿಕವಾಗಿ ಹರಡದಂತೆ ತಡೆಯುವ ಮಹತ್ವದ ಉದ್ದೇಶವಿದು.
ಬೃಹತ್ ದೇಶ ಮತ್ತು ಅತಿ ಹೆಚ್ಚು ಜನಸಂಖ್ಯೆಯ ದೇಶದಲ್ಲಿ ಇದು ಕಟ್ಟುನಿಟ್ಟಿನ ಆಚರಣೆಗೆ ಎಲ್ಲಾ ರಾಜ್ಯಗಳ ಪೋಲಿಸರ ಶ್ರಮ ಅಪಾರ ಆದರೆ ಇವರ ಶ್ರಮಕ್ಕೆ ಕಪ್ಪು ಚುಕ್ಕೆಯOತೆ ಕೆಲ ಪೋಲಿಸರ ಅತಿರೇಕದ ವತ೯ನೆ ಮಾತ್ರ ಪೋಲಿಸರ ಬಗ್ಗೆ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಯಿತು.
ಇದರಿಂದ ದೇಶದಾದ್ಯ೦ತ ಪೋಲಿಸರ ವಿರುದ್ಧ ಜನ ಆಕ್ರೋಷ ವ್ಯಕ್ತ ಪಡಿಸಿದ್ದಾರೆ ಹಾಗಾಗಿ ಲಾಕ್ ಡೌನ್ ನ 5ನೇ ದಿನದಿ೦ದ ಕತ೯ವ್ಯ ನಿವ೯ಹಿಸುವ ಪೋಲಿಸರಿಗೆ ಲಾಠಿ ಇಲ್ಲದೆ ಕಾಯ೯ ನಿವ೯ಹಿಸಲು ಆದೇಶಿಸಲಾಯಿತು.
ಲಾಠಿ ಇಲ್ಲದ ಪೋಲಿಸರಿಂದ ಲಾಕ್ ಡೌನ್ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಅಂತ ಬಾವಿಸಲಾಗಿತ್ತು ಆದರೆ ಇವತ್ತು ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ್ ರಾವ್ ಲಾಠಿ ರಹಿತ ಪೋಲಿಸರ ಕತ೯ವ್ಯ ಯಶಸ್ವಿಯಾಗಿರುವುದಾಗಿ ಮತ್ತು ಪೋಲಿಸರು ಇನ್ನೂ ಹೆಚ್ಚಿನ ಜನ ಸ್ನೇಹಿ ಆಗಿ ಕತ೯ವ್ಯ ನಿವ೯ಹಿಸಲು ತಿಳಿಸಿದ್ದಾರೆ.
ಭಾರತದ ಲಾಕ್ ಡೌನ್ ಸಂದಭ೯ದಲ್ಲಿನ ಪೋಲಿಸರ ಅತಿರೇಕದ ವತ೯ನೆ ನಾಗರೀಕರ ಮೇಲೆ ನಡೆಸಿದ ಹಲ್ಲೆ ಮಾತ್ರ ಇತಿಹಾಸದಲ್ಲಿ ಒ೦ದು ಕಪ್ಪು ಚುಕ್ಕೆ ಮತ್ತು ಇಡೀ ದೇಶದ ಪೋಲಿಸ್ ವ್ಯವಸ್ಥೆ ಸುದಾರಣೆಗೆ ಒಂದು ಕಾರಣವೂ ಆಗಲಿದೆ.
