ಪರಿಚಯ
ಕನ್ನಡ ಸಂಘ ಬಹರೇನ್ ನಾಲ್ಕು ದಶಕಗಳಿಂದ ಬಹರೇನ್‌ನಲ್ಲಿರುವ ಕನ್ನಡಿಗ-ಕನ್ನಡತಿಯರ ಪಾಲಿಗೆ ಒಂದು ಪುಟ್ಟ ಕರ್ನಾಟಕವೇ ಆಗಿದೆ. ಕನ್ನಡ ಸಂಘ ಬಹರೇನ್, ಕರ್ನಾಟಕಕ್ಕೆ ಸಂಬಂಧಿತ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಕ್ರೀಡಾ ಚಟುಚಟಿಕೆಗಳ ಆಗರವಾಗಿದೆ. ಕನ್ನಡ ಮತ್ತು ಕರ್ನಾಟಕದೊಮಂದಿಗೆ ಬಾಂಧವ್ಯ ಹೊಂದಿರುವವರು ದಿನವು ಇಲ್ಲಿಗೆ ಬಂದು ತಮ್ಮ-ತಮ್ಮ ಹವ್ಯಾಸಗಳಲ್ಲಿ ತೊಡಗಿ, ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿರುವರು.
ಕನ್ನಡ ಭವನ ಬಹರೇನ್ – ಒಂದು ವಿಶಿಷ್ಟ ಯೋಜನೆ
ಬಹರೇನ್‌ನಲ್ಲಿ ಕನ್ನಡದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಇನ್ನೂ ದೊಡ್ಡದಾದ ಹಾಗೂ ಉತ್ತಮವಾದ ವ್ಯವಸ್ಥೆ-ಸೌಲಭ್ಯಗಳ ಅಗತ್ಯ ಕಂಡುಬಂದಿತು. ಇದು ನಮ್ಮ ಕನಸಿನ ಯೋಜನೆ – “ಕನ್ನಡ ಭವನ”ಕ್ಕೆ ಅಡಿಪಾಯವಾಯಿತು.
“ಹೊಸ ಕನ್ನಡ ಭವನ’ವು ದ್ವೀಪದಲ್ಲಿರುವ ಪ್ರತಿಯೊಬ್ಬ ಕನ್ನಡಿಗ-ಕನ್ನಡತಿಯರಿಗೂ ನೆಚ್ಚಿನ ಕನಸು. ಹೊಸ ಭವನವು ಕರ್ನಾಟಕ ಮತ್ತು ಕನ್ನಡಕ್ಕೆ ಸಂಬಂಧಿತ ಎಲ್ಲಾ ತರಹಗಳ ಸಾಂಸ್ಕೃತಿ, ಪಾರಂಪರಿಕ, ಸಮುದಾಯದ ಹಾಗೂ ಕ್ರೀಡಾ ಚಟುವಟಿಕೆಗಳುಳ್ಳ ಲವಲವಿಕೆಯ ಆಗರವಾಗಲಿದೆ. ಇದು ಮನೆಯಿಂದ ಹೊರಗಿರುವ ಮನೆಯಾಗಲಿದೆ; ಅಕ್ಷರಶಃ “ಕೊಲ್ಲಿಯ ಮುತ್ತು” ಆಗಲಿದೆ.
ಪ್ರಸ್ತಾಪಿತ ಹೊಸ ಕಟ್ಟಡದ ವಿನ್ಯಾಸ ಮತ್ತು ರೂಪರೇಖೆಗಳುಳ್ಳ ಕಿರುಪತ್ರಗಳನ್ನು ಸದಸ್ಯರುಗಳೊಂದಿಗೆ ಹಂಚಲಾಯಿತು.
“ಕನ್ನಡ ಭವನ” ಕನಸು ಸಾಕಾರಗೊಳಿಸುವತ್ತ ಮೊದಲ ಹೆಜ್ಜೆ
ಕನ್ನಡ ಸಂಘ ಬಹರೇನ್ ತನ್ನ ಹೊಸ ಭವನವನ್ನು ನಿರ್ಮಿಸುವ ಗುತ್ತಿಗೆಯನ್ನು ಸೆಮ್ಟೆಕ್ ಇಂಟರ್ನ್ಯಾಷನಲ್ ಕಂಸ್ಟ್ರಕ್ಷನ್ ಡಬ್ಲೂಎಲ್‌ಎಲ್ ಗೆ ವಹಿಸಿದೆ.
೨೦೧೯ರ ಫೆಬ್ರುವರಿ ೩ರಂದು ಗುತ್ತಿಗೆಯ ಒಪ್ಪಂದಕ್ಕೆ ಕನ್ನಡ ಸಂಘ ಬಹರೇನ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಹಾಗೂ ಸೆಮ್ಟೆಕ್ ಇಂಟರ್ನ್ಯಾಷನಲ್ ಕಂಸ್ಟ್ರಕ್ಷನ್ ಅಧ್ಯಕ್ಷ ಸಿಸೆಲ್ ಪನಯಿಲ್ ಸೊಮನ್ ಅವರು ಸಹಿ ಹಾಕಿದರು. ಈ ಸಮಯ ಸಲಹೆಗಾರ ಇಳನ್ ಕುಮಾರನ್, ಕನ್ನಡ ಸಂಘ ಕಟ್ಟಡ ಸಮಿತಿ ಅಧ್ಯಕ್ಷ ಆಸ್ಟಿನ್ ಸಂತೋಷ್, ಸೆಮ್ಟೆಕ್ ಪ್ರಧಾನ ವ್ಯವಸ್ಥಾಪಕ ಸಾಂತಿ ಜೋಷುವಾ, ಸಂಘ ಖಜಾಂಚಿ ಪ್ರವೀಣ್ ಶೆಟ್ಟಿ, ಕನ್ನಡಿಗ ಉದ್ಯಮಿ ಅಮರನಾಥ್ ರೈ ಹಾಗೂ ತಾಂತ್ರಿಕ ಸಮಿತಿ ಸದಸ್ಯರಾದ ಮಹೇಶ್ ಕುಮಾರ್, ಅನಿಲ್ ಧೀರಜೆ ಮತ್ತು ವೇಣುಗೋಪಾಲ್ ಉಪಸ್ಥಿತರಿದ್ದರು. ಅಲ್ಲದೆ ಕನ್ನಡ ಸಂಘ ಬಹರೇನ್ ಹಾಗೂ ಸೆಮ್ಟೆಕ್‌ನ ಸದಸ್ಯರು-ಸಿಬ್ಬಂದಿ ವರ್ಗದವರೂ ಸಹ ಉಪಸ್ಥಿತರಿದ್ದರು.
ಪ್ರಸ್ತಾಪಿತ ಕನ್ನಡ ಭವನದಲ್ಲಿನ ಸೌಲಭ್ಯಗಳು
ಕನ್ನಡ ಭವನ ನಿರ್ಮಾಣದ ಮೊದಲ ಹಂತದಲ್ಲಿ ನೆಲ ಅಂತಸ್ತಿನ ನಿಲುಗಡೆ ಜಾಗ ಮತ್ತು ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ. ಅಲ್ಲದೇ, ೪೦೦ ಆಸನಗಳ ಆಡಿಟೋರಿಯಂ, ಪರಿಪೂರ್ಣ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ತರಗತಿ ಮತ್ತು ತರಬೇತಿಗಳಿಗಾಗಿ ಕೊಠಡಿಗಳು, ಒಳಾಂಗಣ ಕ್ರೀಡಾಂಗಣ ವ್ಯವಸ್ಥೆಗಳು, ಉಪಾಹಾರ ಕೇಂದ್ರ, ಸಭಾಂಗಣಳು ಸಹ ನಿರ್ಮಾಣವಾಗಲಿವೆ ಎಂದು ಕನ್ನಡ ಸಂಘ ಬಹರೇನ್ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಅವರು ತಿಳಿಸಿದರು.
ಸಿಸೆಲ್ ಪನಯಿಲ್ ಸೊಮನ್
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಧ್ಯಪ್ರಾಚ್ಯ ವಲಯ, ಇಂಡ್‌ಸಮಾಚಾರ್, ಬಹರೇನ್
