ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆ ತರಲಿರುವ ಮೋದಿ ಸರ್ಕಾರ
ಸಾರ್ವತ್ರಿಕ ಮೂಲಭೂತ ಅದಾಯ (ಯುಬಿಐ), ಸಾಮಾಜಿಕ ಭದ್ರತೆಯ ಒಂದು ರೂಪ. ಇದು ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಬಡತನವನ್ನು ತೆಗೆದುಹಾಕುವಲ್ಲಿ ನೆರವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ಭದ್ರತೆ ಮತ್ತು ಘನತೆಯನ್ನು ಖಾತ್ರಿಗೊಳಿಸುತ್ತದೆ.
ಮಾನವ ಶ್ರಮದ ಸ್ಥಾನವನ್ನು ತಂತ್ರಜ್ಞಾನವು ತನ್ನದಾಗಿಸಿಕೊಳ್ಳುತ್ತಿದೆ. ಇದರಿಂಗಾಗಿ ವೇತನ ಆದಾಯ ಮತ್ತು ಕೊಳ್ಳುವ ಸಾಮರ್ಥ್ಯ – ಇವೆರಡರ ಪ್ರಮಾಣ ಕಡಿಮೆಯಾಗುತ್ತದೆ. ಕೊಳ್ಳುವ ಸಾಮರ್ಥ್ಯದ ನಷ್ಟವನ್ನು ಯುಬಿಐ ಸರಿದೂಗಿಸುತ್ತದೆ.
ಮೋದಿ ಸರ್ಕಾರವು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮೊದಲು ಸಾರ್ವತ್ರಿಕ ಮೂಲಭೂತ ಅದಾಯ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಸರ್ಕಾರವು ತೆರಿಗೆ ಮತ್ತು ಇತರ ಮೂಲಗಳಿಂದ ತನಗೆ ಬಂದ ಆದಾಯವನ್ನು ಖರ್ಚು ಮಾಡುವ ಬಗೆಯಲ್ಲಿ ತೀವ್ರ ಬದಲಾವಣೆಗಳಾಗಲಿವೆ.
ಸಧ್ಯಕ್ಕೆ, ಸರ್ಕಾರವು ವಿವಿಧ ಸೇವೆಗಳು ಮತ್ತು ಸಹಾಯಧನ(subsidies)ಕ್ಕಾಗಿ ಈ ಆದಾಯವನ್ನು ಖರ್ಚು ಮಾಡುತ್ತಿದೆ.
ಯುಬಿಐ ಜಾರಿಗೊಂಡಲ್ಲಿ, ಸರ್ಕಾರವು ಸೇವಾ ವ್ಯವಸ್ಥೆಯಿಂದ ದೂರ ಸರಿದು ನಾಗರಿಕರು ನಗದು ರವಾನೆಯ ಮೂಲಕ ಸೇವೆಗಳನ್ನು ಪಡೆಯಲು ಉತ್ತೇಜಿಸುತ್ತದೆ.
ಯುಬಿಐ ಅಡಿಯಲ್ಲಿ, ಶೂನ್ಯ ಆದಾಯ ಹೊಂದಿರುವವರು ಮಾತ್ರ ನಿವ್ವಳ ಲೆಕ್ಕಾಚಾರಗಳಲ್ಲಿ ಪೂರ್ಣ ಅನುಕೂಲಗಳನ್ನು ಪಡೆಯುತ್ತಾರೆ.
ಮೂಲ ಆದಾಯದ ಮೇಲೆ ಹೆಚ್ಚುವರಿ ಆದಾಯವನ್ನು ಗಳಿಸುವವರಿಗೆ, ನಿವ್ವಳ ಅನುಕೂಲಗಳನ್ನು ತೆರಿಗೆ ಮೂಲಕ ಕಳಿಯಲಾಗುವುದು.
ಆದ್ದರಿಂದ ಮೂಲಭೂತ ಆದಾಯ ಸಾರ್ವತ್ರಿಕವಾಗಿದ್ದರೂ, ಬಡವರು ಮಾತ್ರ ಸಂಪೂರ್ಣ ಅನುಕೂಲಗಳನ್ನು ಪಡೆಯುತ್ತಾರೆ.
