ಸಾಗರ ತಾಲ್ಲೂಕಿನ ದಮ೯ಸ್ಥಳ ಸ್ವಸಹಾಯ ಸಂಘ ಸಾಲದ ಕಂತು ಕಟ್ಟಲು ಒತ್ತಾಯಿಸಿ ಮರುಪಾವತಿ ಪ್ರಾರಂಬಿಸಿರುವುದು ಎಷ್ಟು ಸರಿ?
ಕೇಂದ್ರ ಸಕಾ೯ರ ಎಲ್ಲಾ ರಾಷ್ಟ್ರಿಕೃತ ಬ್ಯಾಂಕ್ ಗಳ ಸಾಲ ಮಾಚ೯ ತಿಂಗಳಿಂದ ಮೇ ತಿಂಗಳ ತನಕ ಮರುಪಾವತಿಗೆ ವಿನಾಯಿತಿ ನೀಡಿತ್ತು ನಂತರ ಇದನ್ನು ಆಗಸ್ಟ್ 2020 ರ ತನಕ ಮುಂದೂಡಿದೆ ಕಾರಣ ಕೊರಾನಾ ಸಾಂಕ್ರಮಿಕ ರೋಗದಿಂದ ಇಡೀ ದೇಶ ಲಾಕ್ ಡೌನ್ ನಿಂದ ಅಥಿ೯ಕ ಸಂಕಷ್ಟದಿಂದ ಹೊರಬರಲು.
ಇದೇ ರೀತಿ ರಾಜ್ಯ ಸಕಾ೯ರ ಎಲ್ಲಾ ಸಹಕಾರಿ ಸಂಘ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಗಳ ಸಾಲ ಮರುಪಾವತಿಗೆ ಕಾಲಾವಕಾಶ ನೀಡಿದೆ.
ಸ್ವ ಸಹಾಯ ಸಂಘಗಳು ಪ್ರತಿ ವಾರ ಕಟ್ಟಿಸಿಕೊಳ್ಳುತ್ತಿದ್ದ ಸಾಲದ ಮರುಪಾವತಿ ಮುಂದೂಡಲಾಗಿದೆ ಎಂಬ ಸುದ್ದಿ ಇತ್ತು ಇವತ್ತಿನ ಪತ್ರಿಕೆಯಲ್ಲಿ ಪಕ್ಕದ ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ವ ಸಹಾಯ ಸಂಘಗಳು ಸಾಲ ಮರುಪಾವತಿಗೆ ಕಾಲವಕಾಶ ನೀಡದೆ ಮರು ಪಾವತಿಗೆ ಒತ್ತಾಯಿಸಿದರೆ ಕಾನೂನು ಕ್ರಮ ಎದುರಿಸುವುದಾಗಿ ಎಚ್ಚರಿಸಿದ್ದಾರೆ.
ಆದರೆ ಶಿವಮೊಗ್ಗ ಜಿಲ್ಲೆಯ ಆನಂದಪುರಂ ಭಾಗದ ದಮ೯ಸ್ಥಳ ಸಂಘದ ಅಭಿವೃದ್ದಿ ಅಧಿಕಾರಿ ಕಳೆದ ತಿಂಗಳಿಂದ ಸಾಲದ ಕಂತು ಕಟ್ಟಲೇಬೇಕೆಂದು ಸಾಲಗಾರರಿಂದ ಪ್ರತಿವಾರ ಸಾಲ ವಸೂಲಿ ಮಾಡುತ್ತಿದ್ದಾರೆ.
ಈ ಭಾಗದಲ್ಲಿ ಇಷ್ಟು ದಿನ ಕೂಲಿ ಕೆಲಸ ಇಲ್ಲವಾಗಿತ್ತು, ಈಗಷ್ಟೆ ಕೃಷಿ ಕೆಲಸ ಪ್ರಾರಂಭ ಆಗಿದೆ ಅಷ್ಟರಲ್ಲಿ ಸಾಲದ ಕಂತು ಮರುಪಾವತಿ ಪ್ರಾರ೦ಬಿಸಿರುವುದು ಅನೇಕರಿಗೆ ಕಷ್ಟಸಾಧ್ಯವಾಗಿದೆ.
ದಮ೯ಸ್ಥಳ ಸಂಘ ಎಲ್ಲಾ ಕಡೆ ಸಾಲದ ಮರುಪಾವತಿ ಪ್ರಾರಂಬಿಸಿದೆಯಾ? ಕೇಂದ್ರ ಮತ್ತು ರಾಜ್ಯ ಸಕಾ೯ರದ ಆದೇಶ ಈ ಸಂಘಕ್ಕೆ ಅನ್ವಯ ಆಗುವುದಿಲ್ಲವಾ? ಈ ಬಗ್ಗೆ ಜಿಲ್ಲಾಡಳಿತ ಏನು ಹೇಳುತ್ತದೆ? ಉತ್ತರ ಬೇಕಾಗಿದೆ.

By Arun Prasad
