ಈ ವಿಡಿಯೋ ನೋಡಿ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯದ್ದಿರ ಬಹುದು ಇಲ್ಲಿನ ಸಂಬಾಷಣೆಯಲ್ಲಿ ಇವರು ವೃತ್ತಿಯಲ್ಲಿ ಲೆಕ್ಕ ಪರಿಶೋದಕರು.
ಇವರು ಕೊರಾನ ವೈರಸ್ ಬಗ್ಗೆ ತಿಳುವಳಿಕೆ ಇಲ್ಲದವರಂತೆ ಮತ್ತು ಇದಕ್ಕಾಗಿ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿ ಆಗಿದ್ದು ಗೊತ್ತೇ ಇಲ್ಲದಂತೆ ಜಾಣ ಮರೆವು ತೊರಿಸುತ್ತಿದ್ದಾರೆ.
ಸ್ವತಃ ಕಾರು ಚಲಾಯಿಸುತ್ತಾರೆ, ಒಳ್ಳೆಯ ಉಡುಪು ದರಿಸಿದ್ದಾರೆ ಕನ್ನಡಕ್ಕಿ೦ತ ಹೆಚ್ಚು ಇಂಗ್ಲೀಷ್ ಬಾಷೆ ಬಳಸುತ್ತಾರೆ.
ಆದರೆ ಸ್ಥಳಿಯ ಪೋಲಿಸರು ಸಾವ೯ಜನಿಕರ ಆರೋಗ್ಯ ಕಾಪಾಡಲು ಸಕಾ೯ರದ ಆದೇಶದಂತೆ ಲಾಕ್ ಡೌನ್ ಸರಿಯಾಗಿ ಜಾರಿ ತರಲು ಶ್ರಮಿಸುತ್ತಿದ್ದರೂ ಈ ವಿದ್ಯಾವಂತ ನಾಗರೀಕರ ಅಸಹಕಾರದ ವತ೯ನೆ ಬೇಸರ ತರಿಸುತ್ತದೆ.
ಇವರು ಕಲಿತ ವೃತ್ತಿಯಲ್ಲಿ ಇಷ್ಟು ವಷ೯ದಲ್ಲಿ ಸಾವ೯ಜನಿಕರೊಡನೆ ಯಾವ ರೀತಿ ವತಿ೯ಸಬೇಕು ಮತ್ತು ಕಾನೂನು ಉಲ್ಲಂಘಸ ಬಾರದೆಂಬುದನ್ನ ಕಲಿತಿಲ್ಲವೆ?

By Arun Prasad
