ಚಿತ್ರಗಳ ಕೃಪೆ: thenewsminute.com
ರಾಷ್ಟ್ರೀಯ ಹೆದ್ದಾರಿ ೨೦೬ ಅಗಲಿಸುವಿಕೆಯ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ನೀಡುತ್ತಿರುವ ಪರಿಹಾರ ಏನೇನೂ ಸಾಲದು, ಹಾಗೂ ಈ ಯೋಜನೆಯಿಂದ ಮೂರು ಸೂಕ್ಷ್ಮವಾದ ಪರಿಸರ ವಲಯಗಳು ನಾಶವಾಗುತ್ತವೆ ಎಂಬುದು ರೈತರ ವಾದಿಸುತ್ತಿದ್ದಾರೆ.
ಎರಡು ವಾರಗಳಿಗಿಂತಲೂ ಹಿಂದೆ, ತುಮಕೂರು ಜಿಲ್ಲೆಯ ಕಮ್ಮಗೊಂಡನಹಳ್ಳಿಯ ರೈತ ಶಿವಣ್ನ (೪೦) ತಮ್ಮ ದೈನಿಕ ಬೇಸಾಯದಲ್ಲಿ ತೊಡಗಿದ್ದರು. ಆಗ ದೊಡ್ಡ ಯಂತ್ರವೊಂದು ತಮ್ಮ ಹೊಲದತ್ತ ಮುನ್ನುಗ್ಗುತ್ತಿರುವುದನ್ನು ನೋಡಿದರು. ರಾಷ್ಟ್ರೀಯ ಹೆದ್ದಾರಿ ೨೦೬ ಅಗಲಿಸುವಿಕೆಯ ಯೋಜನೆಯ ಗುತ್ತಿಗೆದಾರರು ಶಿವಣ್ಣನವರ ನಾಲ್ಕು ಎಕರೆ ಗದ್ದೆಯನ್ನು ನೆಲಸಮ ಮಾಡಲು ತಮ್ಮ ಕೆಲಸಗಾರರಿಗೆ ಸೂಚಿಸಿದ್ದರು.
ಯಂತ್ರವು ಇನ್ನೇನು ತಮ್ಮ ಗದ್ದೆಯಲ್ಲಿರುವ ಮೊಟ್ಟಮೊದಲ ತೆಂಗಿನ ಮರವನ್ನು ಸ್ಪರ್ಷಿಸಬೇಕು — ಶಿವಣ್ನ ಯಂತ್ರ ಮತ್ತು ಮರದ ನಡುವೆ ಅಡ್ಡ ನಿಂತು ಜಗ್ಗಲಿಲ್ಲ. “ಇಲ್ಲಿ ಬಂದು ನನ್ನ ಜಮೀನು ಕಬಳಿಸಬಹುದು ಅಂತ ಅನ್ಕೊಂಡಿದೀರಲ್ಲ, ಎಷ್ಟು ಧೈರ್ಯ ನಿಮಗೆ? ಮೊದಲು ನನಗೆ ಪರಿಹಾರ ಕೊಡಕ್ಕೆ ಸರ್ಕಾರಕ್ಕೆ ಹೇಳಿ. ಆಮೇಲೆ ನನ್ನ ಬೆಲೆಬಾಳುವ ಮರಗಳನ್ನು ಕಡಿಯಿರಿ” ಎಂದು ಶಿವಣ್ನ ಖಡಕ್ಕಾಗಿ ಹೇಳಿದರು.
ಶಿವಣ್ಣನವರಂತೆ ತುಮಕೂರು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನೂರಾರು ರೈತರು ಈ ಹೆದ್ದಾರಿ ಚತುಷ್ಪಥಗೊಳಿಸುವಿಕೆಯ ಯೋಜನೆಗಾಗಿ ತಮ್ಮ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾ. ಹೆ. ೨೦೬ರಲ್ಲಿ ತಮಕೂರು ಪಟ್ಟಣ-ಗುಬ್ಬಿ-ತಿಪಟೂರು-ಅರಸೀಕೆರೆ-ಶಿವಮೊಗ್ಗ-ಕಡೂರು ಮೂಲಕ ಹಾದುಹೊಗುವ ೨೧೫ ಕಿಲೋಮೀಟರ್ ಉದ್ದದ ಭಾಗವನ್ನು ಚತುಷ್ಪಥಗೊಳಿಸುವ ಯೋಜನೆ ಕೈಗೆತ್ತಿಕೊಂಡಿದೆ.
ಕೇಂದ್ರ ಸರ್ಕಾರ ತಮ್ಮ ಜಮೀನುಗಳಿಗೆ ಮಾರುಕಟ್ಟೆ ಬೆಲೆ ನೀಡಲು ನಿರಾಕರಿಸುತ್ತಿದೆ ಎಂದು ದೂರಿದ್ದಾರೆ. ನಗಣ್ಯ ಪರಿಹಾರ ನೀಡಿ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವಿಕೆಯ ವಿರುದ್ಧ ಈ ಜಿಲ್ಲೆಗಳಿಂದ ಸುಮಾರು ೧೫೦ ಮಂದಿ ರೈತರು ಜನವರಿ ೧೧ರಿಂದ ಅನಿರ್ದಿಷ್ಟ ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರೈತರು ತಿಪಟೂರಿನಲ್ಲಿರುವ ಸಹಾಯಕ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಠಿಕಾಣಿ ಹೂಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮಾತನಾಡುವ ಅವಕಾಶ ಬೇಡುತ್ತಿದ್ದಾರೆ.
“ಪ್ರಾಧಿಕಾರವು ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನುಗಳ ಪೈಕಿ ೮೦% ರಷ್ಟು ಕೃಷಿ ಭೂಮಿಯಾಗಿದೆ. ಈ ಜಮೀನುಗಳಿಗೆ ನಮಗೆ ಮಾರುಕಟ್ಟೆ ಬೆಲೆ ನೀಡದೆ ಪ್ರಾಧಿಕಾರವು ಕಾನೂನನ್ನು ಉಲ್ಲಂಘಿಸುತ್ತಿದೆ. ನನ್ನದು ೩ ಎಕರೆ ೧೦ ಗುಂಟೆ ಜಮೀನಿದೆ. ಕೇಂದ್ರ ಸರ್ಕಾರವು ಗುಂಟೆಯೊಂದಕ್ಕೆ ಕೇವಲ ೫,೦೦೦ ರೂಪಾಯಿಗಳು ಮಾತ್ರ ನೀಡುವುದೆಂದು ಹೇಳುತ್ತಿದೆ. ಜಮೀನು ಮಾರಿ ನನಗೆ ೧.೫ ಲಕ್ಷ ರೂಪಾಯಿಗಳು ಬರುತ್ತವೆ. ತರಕಾರಿ-ಧಾನ್ಯಗಳ್ನು ಬಳೆಸುವದರ ಮೇಲೆ ನನ್ನ ಕುಟುಂಬವು ಜೀವನ ಸಾಗಿಸುವುದು. ಕೇಂದ್ರ ಸರ್ಕಾರ ಕೊಡುವ ಹಣದಲ್ಲಿ ಕೆಲವೇ ಗುಂಟಗಳ ಜಮೀನೂ ಕೊಳ್ಳಲಾಗದು” ಎಂದು ತಿಪಟೂರಿನ ರೈತ ಮನೋಹರ್ (೪೩) ಹೇಳುತ್ತಾರೆ. ಮನೋಹರ್ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ತೋಡಲು ಸುಮಾರು ೧೩ ಲಕ್ಷ ರಊಪಾಯಿಗಳನ್ನು ಖರ್ಚು ಮಾಡಿದ್ದಾರೆ. ಅವರ ಜಮೀನಿನ ಮಾರುಕಟ್ಟೆ ಬೆಲೆ ಗುಂಟೆಯೊಂದಕ್ಕೆ ೨ ಲಕ್ಷ ರೂಪಾಯಿಗಳು.
“ನನ್ನದು ತೆಂಗಿನಕಾಯಿ ತೋಟವಿದೆ. ಜೊತೆಗೆ ಅಡಿಕೆ ಮತ್ತು ತರಕಾರಿ ಸಹ ಬೆಳೆಸುತ್ತಿದ್ದೇನೆ. ಇದವರೆಗೂ ನಾನು ಮತ್ತು ನನ್ನ ಕುಟುಂಬ ಸಂತೋಷದಿಂದಿದ್ದೆವು. ನಮಗೆ ಸೂಕ್ತ ಪರಿಹಾರ ಸಿಗದಿದ್ದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. ನಾವು ಈ ಯೋಜನೆಯನ್ನು ವಿರೋಧಿಸುತ್ತಿಲ್ಲ, ಬದಲಿಗೆ ಕೇಂದ್ರ ಸರ್ಕಾರವು ನಮ್ಮ ಜಮೀನಿಗೆ ಸೂಕ್ತ ಬೆಲೆ ಕೊಡಬೇಕು ಇಲ್ಲ ಇನ್ನಂದೆಡೆ ಕೃಷಿ ಭೂಮಿ ನೀಡೇಕು” ಎನ್ನುತ್ತಾರೆ ಶಿವಣ್ನ.
ಅನಿರ್ದಿಷ್ಠ ಪ್ರತಿಭಟನೆ ಆರಂಘಗೊಂಡು ಏಳು ದಿನಗಳು ಕಳೆದಿವೆ. ಸಹಾಯಕ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಅಸಂತುಷ್ಟ ರೈತರು ಠಿಕಾಣಿ ಹೂಡಿ ಅಲ್ಲೇ ಅಡುಗೆ-ತಿಂಡಿ-ಊಟ-ನಿದ್ದೆ ಮಾಡುತ್ತಿದ್ದಾರೆ. ಸೂಕ್ತ ಪರಿಹಾರ ಸಿಗುವ ವರೆಗೂ ಒಂದು ಯಂತ್ರವನ್ನೂ ಒಳಗೆ ಸೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
“ಕೇಂದ್ರ ಸರ್ಕಾರವು ಭೂಸ್ವಾಧೀನ ಕಾಯಿದೆ ೨೦೧೩ರ ಅಡಿ ದರಗಳನ್ನು ನಿಗಧಿಪಡಿಸಿದೆ. ನಾವು ೨೦೧೬ರಲ್ಲಿ ಭೂಮಿಯ ಮಾರುಕಟ್ಟೆಯ ಸರಾಸರಿ ಬೆಲೆಯನ್ನು ಪರಿಗಣಿಸಿದೆವು. ಭೂಮಿಯ ಬೆಲೆಯು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳುತ್ತದೆ. ಇಲ್ಲೇನಾದರೂ ತಪ್ಪಾಗಿದ್ದಲ್ಲಿ ಸರಿಪಡಿಸುತ್ತೇವೆ. ದರಗಳ ಬಗ್ಗೆ ಅಸಮಾಧಾನವಿದ್ದಲ್ಲಿ ರೈತರು ನ್ಯಾಯಾಲಯಕ್ಕೆ ಹೋಗಿ ಮನವಿ ಸಲ್ಲಿಸಬಹುದು” ಎಂದು ಯೋಜನೆಗಾಗಿ ನೇಮಕಗೊಂಡ ಭೂಸ್ವಾಧೀನಾಧಿಕಾರಿ ಯಶೋಧಾ ಹೇಳುತ್ತಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪರಿಸರ ಸಮೀಕ್ಷೆ ನಡೆಸಲಿಲ್ಲ, ಈ ಯೋಜನೆಯು ಮೂರು ಸೂಕ್ಷ್ಮ ಪರಿಸರ ವಲಯಗಳ ಮೂಲಕ ಹಾದುಹೋಗುತ್ತದೆ. ಈ ಯೋಜನೆ ಅನುಷ್ಠಾನಗೊಂಡಲ್ಲಿ ಮಾನವ-ಪ್ರಾಣಿ ನಡುವಣ ಘರ್ಷಣೆಯ ಸಮಸ್ಯೆ ಹೆಚ್ಚಾಗುವ ಭೀತಿಯಿದೆ. ತುಮಕೂರಿನಲ್ಲಿರುವ ಆನೆ ಮಾರ್ಗವು ಹಾಳಾಗುತ್ತದೆ. ಗುಬ್ಬಿಯಲ್ಲಿರುವ ಬುಕ್ಕಾಪಟ್ಟಣ ಕಾಡು ಹಾಗೂ ತಿಪಟೂರಿನಲ್ಲಿರುವ ಚೌಡಲಾಪುರ ಮತ್ತು ಕೋಣನಕಾವಲು ಕಾಡುಗಳು ಹಾಳಾಗುತ್ತವೆ. ಪರಿಸರ ಸಮೀಕ್ಷೆ ನಡೆಸದ ಕಾರಣ ಸರ್ಕಾರವು ಕಡಿಯಲಾಗುವ ಮರಗಳ ಎಣಿಕೆ ಕೂಡ ಮಾಡಿಲ್ಲ. ತುಮಕೂರು ಜಿಲ್ಲೆಯಲ್ಲಿ ಮಾನವ-ಪ್ರಾಣಿ ನಡುವೆ ಘರ್ಷಣೆಗಳು ಹೆಚ್ಚಾಗಿವೆ. ಹಲವು ಚಿರತೆಗಳು, ನರಿಗಳು, ಹಾವುಗಳು ಮತ್ತು ಆನೆಗಳು ಸತ್ತಿವೆ. ರಸ್ತೆಗಳು ಕಾಡಿಕೊಳಗೆ ಬಂದಲ್ಲಿ, ಇನ್ನಷ್ಟು ತೊಂದರೆಯಾಗುತ್ತದೆ” ಎಂದು ಮನೋಹರ್ ಹೇಳಿದರು.
