ಕನ್ನಡ

ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.

ಕೊರಾನಾಲಾಕ್ಡೌನ್_ಡೈರಿ_2020

ಲೆಟರ್_ನOಬರ್_23

ದಿನಾ0ಕ26ಏಪ್ರಿಲ್_2020

*ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.

ಸಾಧ್ಯವೇ ಇಲ್ಲ ಅಂತ ಬಾವಿಸಿದ್ದು ಅದಾಗಿ ನಡೆದೇ ಹೋಯಿತು, ಸಿನಿಮಾ ಇಲ್ಲದೆ ಸಾಧ್ಯವೆ? ಮಾಲ್ ಇಲ್ಲದೆ ಸಾಧ್ಯವೆ? ಶಾಲೆ ಇಲ್ಲದೆ ಸಾಧ್ಯವೇ? ಹೋಟೆಲ್ ಅಂಗಡಿ ಇಲ್ಲದೆ ಸಾಧ್ಯವೆ? ಬಸ್, ರೈಲು, ವಿಮಾನ ಇಲ್ಲದೆ ಸಾಧ್ಯವೇ? ಅಂತೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಮಧ್ಯದ ಅಂಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ ಮದ್ಯ ಮಾರಾಟದ ಲಾಬಿಯ ಶಕ್ತಿಯ ಮುಂದೆ ಸಕಾ೯ರ ಏನೇನೂ ಅಲ್ಲ ಅಂತ ಬಾವಿಸಿದ್ದು ಹುಸಿ ಆಯಿತು.
ಲಾಕ್ ಡೌನ್ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಪಾದನೆ, ಅವರು ನೀಡಿದ ಕರೆ ಚಪ್ಪಾಳೆ ತಟ್ಟಿ ಜನರ ಆರೋಗ್ಯಕ್ಕಾಗಿ ದುಡಿಯುವವರಿಗೆ ಬೆಂಬಲಿಸಿ ಎಂದದ್ದು, ರಾತ್ರಿ ದೀಪ ಬೆಳಗಿಸಿ ಒಗ್ಗಟು ಪ್ರದಶಿ೯ಸಿ ಎಂದಿದ್ದು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ದೇಶದಾದ್ಯಂತ ಜನತೆ ಪಕ್ಷಾತೀತವಾಗಿ ಬೆಂಬಲಿಸಿದರು.
ದೇಶದ ಈ ಸಂಕಷ್ಟದಲ್ಲಿ ಒಗ್ಗಟ್ಟು ಪ್ರದಶಿ೯ಸಿ ಆಳುವ ಸಕಾ೯ರಕ್ಕೆ ಸಹಕರಿಸಿದರೆ ನಮ್ಮ ಜೀವ ಸುರಕ್ಷಿತ ಎಂಬ ತಿಳುವಳಿಕೆ ಸಾವ೯ಜನಿಕರಲ್ಲಿ ಮೂಡಿದೆ.
ಮಾಚ೯ 26ಕ್ಕೆ ಕನಾ೯ಟಕದಲ್ಲಿ ಕೊರಾನ ವೈರಸ್ ಸೋoಕು 55 ಜನರಿಗೆ ಹರಡಿತ್ತು ಮತ್ತು 2 ಸಾವು ಆಗಿತ್ತು.
ಇಡೀ ದೇಶದಲ್ಲಿ 18 ಸಾವು ಆಗಿತ್ತು ಮತ್ತು 721 ಜನರಿಗೆ ಸೋ೦ಕು ಹರಡಿತ್ತು.
ಇವತ್ತು ಅಂದರೆ ಏಪ್ರಿಲ್ 25ಕ್ಕೆ ಇಡೀ ದೇಶದಲ್ಲಿ ಕೊರಾನ ವೈರಸ್ ನಿಂದ 24942 ಜನರಿಗೆ ಸೋ೦ಕು ಹರಡಿದೆ, ಸಾವು 780 ಆಗಿದೆ.
ಅಮೆರಿಕಾದಲ್ಲಿ ಈ ಸೋ೦ಕು ಇವತ್ತಿಗೆ 9 ಲಕ್ಷ ದ 41 ಸಾವಿರದ 478 ಜನರಿಗೆ ಹರಡಿದೆ, 52 ಸಾವಿರದ 948 ಸಾವು ಆಗಿದೆ.
ಬೇರೆ ದೇಶದ ಜೊತೆ ಹೋಲಿಸಿದರೆ ಭಾರತದಲ್ಲಿ ಇದರ ಪ್ರಮಾಣ ಕಡಿಮೆ ಆದರೂ ಒಂದು ವೇಳೆ ಲಾಕ್ ಡೌನ್ ತೆಗೆದ ಮೇಲೆ ಜನತೆ ಮೈಮರೆತರೆ ಮೇ ತಿಂಗಳ ಅಂತ್ಯದಲ್ಲಿ ಈ ವೈರಸ್ 2 ಲಕ್ಷ ದಾಟಿದರೆ ಸುಮಾರು 90 ಸಾವಿರ ಜನರನ್ನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಡ್ಮಿಟ್ ಮಾಡಬೇಕಾದ ಸಂದಭ೯ ಬರುವ ಸಾಧ್ಯತೆ ತೆಗೆದು ಹಾಕುವ ಹಾಗಿಲ್ಲ.
ಹಾಗಾದರೆ ನಮ್ಮ ದೇಶದ ಪರಿಸ್ಥಿತಿ ಯಾವ ನಿಯOತ್ರಣಕ್ಕೂ ಸಿಗಲಾರದು, ಹಾಗಾಗದಿರಲಿ, ದೇಶದ ಅದೃಷ್ಟ ಮತ್ತು ದೇವರ ದಯೆ ಈ ಕೊರಾನ ವೈರಸ್ ದೇಶದಿಂದಲೇ ಅಷ್ಟೆ ಅಲ್ಲ ಪ್ರಪ೦ಚದಿಂದಲೆ ನಿಗ೯ಮಿಸಲಿ ಎಂದು ಹಾರೈಸೋಣ.
ಸೆಪ್ಟೆ೦ಬರ್ ಅಂತ್ಯದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆಯ ಔಷದಿ ಬಳಕೆಗೆ ಸಿಗಬಹುದಾದ ಪ್ರಯೋಗಗಳು ನಡೆಯುತ್ತಿದೆ ಅಲ್ಲಿನ ವರೆಗೆ ನಾವು ಆದಷ್ಟು ಸ್ವಯಂ ಮತ್ತು ಸ್ವಾವಲಂಬನೆಯಿಂದ ಎಚ್ಚರಿಕೆ ಜೀವನ ನಡೆಸಬೇಕಾಗಿದೆ.
ಎಲ್ಲದನ್ನು ನಕಾರತ್ಮಕವಾಗಿ ಪರಿಗಣಿಸದೆ ಸಕಾರತ್ಮಕ ಚಿಂತನೆಯ ಒಗ್ಗಟ್ಟು ಕಾಪಾಡಿಕೊಳ್ಳಬೇಕಾದ ಅತಿ ಅನಿವಾಯ೯ತೆ ಇದೆ.

By Arun Prasad

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

520, Asmi Industrial Complex, Near Ram Mandir Railway Station, Goregaon West, 400104, Mumbai, Maharashtra.

Download Our Mobile App

IndSamachar Android App IndSamachar IOS App
To Top
WhatsApp WhatsApp us