ಡಾ. ಕ್ಯಾರೊಲ್ ಕ್ರಿಸ್ಟೀನ್ ಫೇರ್ ಅಮೆರಿಕಾದ ಒಬ್ಬ ರಾಜಕೀಯ ವಿಶ್ಲೇಷಿಕೆ. ಅಮೆರಿಕಾ ರಾಜಧಾನಿ ವಾಷಿಂಗ್ಟನ್ ಡಿಸಿಯ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಭದ್ರತಾ ಅಧ್ಯಯನ ಕಾರ್ಯಕ್ರಮದ ಒಬ್ಬ ಸಹ-ಪ್ರಾಧ್ಯಾಪಿಕೆ. ಭಯೋತ್ಪಾದನ-ವಿರೋಧಿ ವಿಚಾರಗಳು ಮತ್ತು ದಕ್ಷಿಣ ಏಷ್ಯಾ ಅಧ್ಯಾಯಗಳ ಬಗ್ಗೆ ಬಹಳಷ್ಟು ಸಂಶೋಧನೆ ನಡೆಸಿ ಕಿರುಪುಸ್ತಕಗಳನ್ನು ಬರೆದಿದ್ದಾರೆ. ಇವರು ಇಂಗ್ಲಿಷ್ ಅಲ್ಲದೆ ಹಿಂದಿ, ಪಂಜಾಬಿ ಸಹ ಮಾತನಾಡಬಲ್ಲರು.
ಡಾ. ಫೇರ್ ಪಾಕಿಸ್ತಾನದಲ್ಲಿ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಕಳೆದು, ಪಾಕಿಸ್ತಾನ ಹುಟ್ಟುಹಾಕಿದ ಅತಿ ಮಾರಕ ಭಯೊತ್ಪಾದನಾ ಸಂಘಟನೆ ಲಷ್ಕರ್-ಎ-ತಯಿಬಾ ದವರ ಮನೋಭಾವವನ್ನು ಅಧ್ಯಯನ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಕಿತ್ತುಕೊಂಡು ತನ್ನದಾಗಿಸಿಕೊಳ್ಳಲು ಹವಣಿಸುತ್ತಿರುವ ಪಾಕಿಸ್ತಾನವು ಭಯೋತ್ಪಾದಕರನ್ನು ಪ್ರೋತ್ಸಾಹಿಸಿ ಉತ್ತೇಜಿಸುತ್ತಿರುವುದು ರಹಸ್ಯವೇನಲ್ಲ.
ಹಲವಾರು ವಿಚಾರಗಳಲ್ಲಿ ಭಾರತದೊಂದಿಗಿನ ಸ್ಪರ್ಧೆಯಲ್ಲಿ ತಾನು ಹಿಂದುಳಿಯುತ್ತಿದೆ ಎಂದು ಅರಿತಿರುವ ಪಾಕಿಸ್ತಾನ ಭಾರತದ ನೆಲೆಯಲ್ಲಿ ಭಯೋತ್ಪಾದಕರನ್ನು ಛೂ ಬಿಡುವ ಕಿತಾಪತಿ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ.
ಲಷ್ಕರ್ ಸೇರಿದಂತೆ ಈ ಭಯೋತ್ಪಾದಾ ಸಂಘಟೆಗಳು ಪಾಕಿಸ್ತಾನದ ನೆಲೆಯಲ್ಲಿ ಸರ್ಕಾರ ಮತ್ತು ಸೇನೆಯ ವಿರುದ್ಧ ಯಾವುದೇ ಚಟುವಟಿಕೆಗಳನ್ನು ಮಟ್ಟ ಹಾಕುತ್ತವೆ; ಇನ್ನೊಂದೆಡೆ ಭಾರತ ಹಾಗೂ ಇತರೆ ದೇಶಗಳಲ್ಲಿ ಇಸ್ಲಾಮ್-ವಿರೋಧಿ ಅಥವಾ ಇಸ್ಲಾಮ್ಅನ್ನು ಅನುಸರಿಸದ ಹಿಂದೂ, ಕ್ರಿಸ್ಟಿಯನ್ ಹಾಗೂ ಇತರೆ ಧರ್ಮದವರನ್ನು ಕೊಂದುಹಾಕಿ ಭಯೋತ್ಪಾದನಾ ಚಟುಚಟಿಕೆಗಳಲ್ಲಿ ಮಗ್ನವಾಗಿವೆ ಎಂದು ಡಾ. ಫೇರ್ ತಮ್ಮ ಸಂಶೋಧನಾ ವರದಿಯಲ್ಲಿ ಹೇಳಿದ್ದಾರೆ.
ಭಯೋತ್ಪಾದನಾ ಚಟುವಟಿಕೆಗಳ ಜೊತೆಗೆ ಲಷ್ಕರ್ ಸಾಹಿತ್ಯವು ಪಾಕಿಸ್ತಾನದಲ್ಲಿರುವ ಪ್ರತಿಯೊಬ್ಬರು ಇಸ್ಲಾಮ್ ಧರ್ಮವನ್ನು ಪಾಲಿಸಬೇಕು, ಪಾಕಿಸ್ತಾನ, ಭಾರತ ಹಾಗೂ ಇತರೆ ದೇಶದಲ್ಲಿರುವ ಇಸ್ಲಾಮ್-ವಿರೋಧಿಗಳ್ನು ಕೊಲ್ಲಬೇಕು ಎಂದು ಬೋಧಿಸುತ್ತದೆ. ಅಮೆರಿಕನ್ ಕಾಂಗ್ರೆಸ್ ಗ್ರಂಥಾಲಯವು ಲಷ್ಕರ್ ಸಾಹಿತ್ಯವನ್ನು ಕೊಂಡುಕೊಳ್ಳುತ್ತದೆ ಎಂದು ಡಾ. ಫೇರ್ ಹೇಳುತ್ತಾರೆ.
ಡಾ. ಫೇರ್ ಅಭಿಪ್ರಾಯದ ಪ್ರಕಾರ, ಒಂದು ವೇಳೆ ಶಾಂತಿ ನೆಲೆಸಿದಲ್ಲಿ ಪಾಕಿಸ್ತಾನದ ಸೇನೆಯು ತನ್ನ ಅಸ್ತಿತ್ವ ಕಳೆದುಕೊಳ್ಳುವುದು ಖಚಿತ. ಹಾಗಾಗಿ, ಪಾಕಿಸ್ತಾನ ಎಂದಿಗೂ ಶಾಂತಿಗಾಗಿ ಪ್ರಯತ್ನನಿಸಲಾರದು. ಅಲ್ಲಿ ಯಾರೇ ಪ್ರಧಾನಿಯಾಗಿ ಶಾಂತಿಯ ಮಾತು ಹೇಳಿದರೂ ಭಾರತೀಯರು ನಂಬಬಾರದು. ಆ ಹುದ್ದೆಯಲ್ಲಿರುವವರು ಅಪ್ರಸ್ತುತ. ಭಾರತವು ಪಾಕಿಸ್ತಾನದೊಂದಿಗೆ ಯುದ್ಧಕ್ಕಿಳಿದರೆ ಗೆಲ್ಲುವುದು ಕಷ್ಟ, ಹಾಗಾಗಿ ಆರ್ಥಿಕ ಬೆಳವಣಿಗೆಯತ್ತ ಗಮನ ಹರಿಸಿ ಪಾಕಿಸ್ತಾನ “ಮಾಡಿದ್ದುಣ್ಣೋ ಮಾರಾಯ” ಎಂಬ ಸ್ಥಿತಿಗೆ ಬರಲಿ ಎಂದು ಆಶಿಸಬೇಕಷ್ಟೆ.
