ಬಿದಿರಕ್ಕಿ ಬಂದು ಮೂರು ವರುಷ ಬಿದಿರು ಸಂಪೂಣ೯ ನಾಶವಾಗಿತ್ತು, ಬಿದಿರು ಸಂತಾನವೇ ಇರಲಿಲ್ಲ.
ಪ್ರತಿ ವರ್ಷ ಎಳೆ ಬಿದಿರಿನ ಕಳಲೆಯ ಪಧಾಥ೯ಗಳನ್ನ ರೊಟ್ಟಿ/ದೋಸೆ/ಇಡ್ಲಿ / ಅನ್ನದೊಡನೆ ಸವಿಯುವ ಮತ್ತು ಕಳಲೆ ಉಪ್ಪಿನಕಾಯಿ ನಂಚಿಕೊಳ್ಳುವ ಅಭ್ಯಾಸ ಇದ್ದವರಿಗೆ ನಿಜಕ್ಕೂ ರಸಭಂಗ ಆಗಿತ್ತು.
ಈಗ ಪುನಃ ಬಿದಿರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ ಹಾಗಾಗಿ ಕಳಲೆ ಪ್ರಿಯರ ಆಸೆ ನೆರವೇರುತ್ತಿದೆ.
ಈ ಬಾರಿಯ ಕಳಲೆ ಮತ್ತು ಕಳಲೆ ಪಲ್ಯ, ಅಕ್ಕಿ ರೊಟ್ಟಿ ಮತ್ತು ಬೆಣ್ಣೆಯ ಚಿತ್ರ ನಿಮಗಾಗಿ.

By Arun Prasad
