ಶತಾಯುಷಿ, “ನಡೆದಾಡುವ ದೇವರು” ಶ್ರೀ ಡಾ|| ಶಿವಕಿಮಾರ ಸ್ವಾಮೀಜಿ ಅವರನ್ನು ಸಿದ್ಧಗಂಗಾ ಮಠಕ್ಕೆ ವಾಪಸ್ ಕರತರಲಾಗಿದೆ.
ಇಂದು ಮುಂಜಾನೆ ಚೆನ್ನೈಯಿಂದ ಏರ್ ಆಂಬ್ಯುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತಂದು, ಅಲ್ಲಿಂದ ಅಂಬುಲೆನ್ಸ್‌ನಲ್ಲಿ ತುಮಕೂರಿನಲ್ಲಿರುವ ಸಿದ್ಧಗಂಗಾ ಮಠಕ್ಕೆ ಕರೆದೊಯ್ಯಲಾಯಿತು.
ಕಳೆದ ೧೩ ದಿನಗಳಿಂದ ಚೆನ್ನೈನಲ್ಲಿರುವ ರೇಳಾ ಆಸ್ಪತ್ರೆಯಲ್ಲಿ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
“ಶ್ರೀಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆದರಎ ಮಠಕ್ಕೆ ಕರೆದೊಯ್ಯುವಂತೆ ಶ್ರೀಗಳು ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ ಆಂಬುಲೆನ್ಸ್ ಮುಲಕ ಮಠಕ್ಕೆ ಕರೆತರಲಾಗಿದೆ. ಮಠದಲ್ಲೇ ಚಿಕಿತ್ಸೆ ಮುಂದುವರೆಸಲಾಗುತ್ತದೆ ಎಂದು ಡಾ. ಪರಮೇಶ್ವರ್ ತಿಳಿಸಿದ್ದಾರೆ.
