ಇಂದು (28-04-2020) ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರ ನೇತೃತ್ವದಲ್ಲಿ ಕೊರೋನ ವಾರಿಯರ್ಸ್ ಗಳಾಗಿ ಶ್ರಮಿಸುತ್ತಿರುವ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಸಾಗರ ಟೌನ್ ಮಹಿಳಾ ಸಮಾಜದವರು ಆರತಿ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಪ್ರಕಾಶ್ ಭೋಸ್ಲೆ, ಮೋಹನ್, ನಾಗೇಂದ್ರಪ್ಪ, ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ಮಾ.ಸ ನಂಜುಂಡಸ್ವಾಮಿ, ವಿನಾಯಕ್ ರಾವ್, ಬಿ.ಟಿ.ರವೀಂದ್ರ, ಹಾಗೂ ಮಹಿಳಾ ಸಮಾಜದ ಅಧ್ಯಕ್ಷರಾದ ಶೋಭಾ ಲಂಬೋಧರ್, ಮೈತ್ರಿ ಪಾಟೀಲ್, ನಿರ್ಮಲ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

By Goutham K S, Sagara
