ಮೂಲ: ಸಿಬಿನ್ ಪಿ ಸೋಮನ್
ರಾಜ್ಯದ ಜನತೆಯು ಒಂದು “ಸ್ಪೋಟಕ ಸುದ್ದಿ”ಯ ನಿರೀಕ್ಷೆಯಲ್ಲಿದೆ. ರಾಜ್ಯದಲ್ಲಿ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಯುಂಟಾಗುತ್ತಿರುವ ವರದಿಗಳು ಬಂದಿವೆ. ಆರೋ ಎಂಟೋ ಮಂದಿ ಕಾಂಗ್ರೆಸ್ ಶಾಸಕರು ಕಮಲ ಪಡೆಯ ತೆಕ್ಕೆಗೆ ಸೇರಲಿದ್ದಾರೆಂದು ವರದಿಯಾಗಿದೆ.
ಅಧಿಕಾರದಲ್ಲಿರುವ ಮೈತ್ರಿ ಪಡೆ ಶಾಸಕರು ಭಾರತೀಯ ಜನತ ಪಕ್ಷವು ತಮ್ಮ ಶಾಸಕರಿಗೆ ಆಮಿಷವೊಡ್ಡಿ ತಮ್ಮತ್ತ ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ. ಭಾಜಪವು ಇದನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
ಏತನ್ಮಧ್ಯೆ ಭಾಜಪವು ತಮ್ಮ ಶಾಸಕರನ್ನು ಪ್ರತ್ಯೇಕ ಗುಂಪುಗಳಲ್ಲಿ ಭಾಗ ಮಾಡಿ ಬೇರೆ-ಬೇರೆ ಜಾಗಗಳಲ್ಲಿ ಸುರಕ್ಷಿತವಾಗಿ ಅವಿತಿಟ್ಟಿದ್ದಾರೆಂದು ವರದಿಯಾಗಿದೆ. ಎಚ್ ನಾಗೇಶ್ ಮತ್ತು ಆರ್ ಶಂಕರ್ ಸರ್ಕಾರಕ್ಕೆ ತಮ್ಮ ಬೆಂಬಲ ಹಿಂಪಡೆದುಕೊಂಡಿದ್ದು, ಕೇಸರಿ ಪಕ್ಷವು ಈ ಪಕ್ಷೇತರರತ್ತ ಕಣ್ಣಿಟ್ಟಿದೆ.
ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಕಾರಣ ಈ ರಾಜಕೀಯ ಆಟಗಳನ್ನು ನೋಡಬೇಕಾದ ದೌರ್ಭಾಗ್ಯ ನಾಡಿನ ಜನತೆಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
