ಬಾರತ ಚೀನ ಗಡಿ ತಗಾದೆ ಈ ಕೊರಾನ ಗಂಡಾಂತಕಾರಿ ಸನ್ನಿವೇಶದಲ್ಲಿ ತಕ್ಷಣ ಮಾತುಕತೆ ಮತ್ತು ಸಂದಾನದಲ್ಲಿ ಮುಕ್ತಾಯವಾಗಲಿ ಎಂದು ಹಾರೈಸೋಣ ಯಾಕೆಂದರೆ 50 ದಿನದ ಲಾಕ್ ಡೌನ್ ಸುದಾರಿಸಿಕೊಳ್ಳುವುದೆಷ್ಟು ಕಷ್ಟ ಅಂತ ಈಗಷ್ಟೆ ಅರಿತಿದಿದ್ದೇವೆ ಇನ್ನು ಭಾರತ ಚೀನಾ ಯುದ್ದ ಆದರೆ ಗೆಲುವು ಸೋಲುಗಳಿಗಿಂತ ದೇಶದ ಆಂತರಿಕ ಆರೋಗ್ಯ ತುತು೯ ಸ್ಥಿತಿ ನಿಭಾಯಿಸಲು ಪಡುತ್ತಿರುವ ಕಷ್ಟದ ಈ ಸಂದಭ೯ ಯುದ್ದೊನ್ಮಾದದ ಸಮಯವಂತೂ ಆಗಿರುವುದಿಲ್ಲ.
ಆಗ ಕೇಂದ್ರ ರಕ್ಷಣಾ ಸಚಿವರಾಗಿದ್ದ ಜಾಜ್೯ ಪನಾ೯೦ಡೀಸ್ ಹೇಳಿಕೆ ನೆನಪಿಸಿಕೊಳ್ಳಿ ನಮಗೆ ಯಾವತ್ತಿದ್ದರೂ ಚೀನಾದಿಂದ ತೊಂದರೆ ಇದೆ ನಮಗೆ ನಿಜವಾದ ಶತೃ ರಾಷ್ಟ್ರ ಚೀನಾ ದೇಶ ಪಾಕಿಸ್ತಾನವಲ್ಲ ಅಂದದ್ದು.
ಚೀನಾ ದಿನ ಒಳಕೆ ವಸ್ತು ಬಹಿಷ್ಕಾರ ಅಷ್ಟು ಸುಲಭ ಸಾಧ್ಯವಿಲ್ಲ, ಒಂದು ಕಡೆ ವ್ಯಾಪಾರ ವ್ಯವಹಾರದ ಬಾಗಿಲು ತೆರೆದು ಕೊಂಡು ಇನ್ನೊಂದು ಕಡೆ ದೇಶದ ಒಳಗೆ ತಂದು ಮಾರಾಟಕ್ಕೆ ಇಟ್ಟ ಮೇಲೆ ಬಹಿಷ್ಕಾರ ಸಾಧ್ಯವಿಲ್ಲ.
ನಮ್ಮ ಸ್ಯೆನಿಕರು 20 ಜನ ವೀರ ಮರಣ ಹೊಂದಿರುವ ನೋವಿನ ಸುದ್ದಿಗಿಂತ ಚೀನಿ ಸೈನಿಕರು 43 ಸೈನಿಕರನ್ನ ಹತ್ಯೆ ಮಾಡಿದ್ದೇವೆ ಎಂಬ ಸುದ್ದಿ ವೈಭವಿಕರಿಸುವುದು ಸರಿ ಅನ್ನಿಸುವುದಿಲ್ಲ.
ನಮಗೆ ಈ ಸಂದಭ೯ ಯುದ್ದ ಬೇಕಾಗಿಲ್ಲ ಎನ್ನುವ ಸಂದೇಶಕ್ಕೆ ಮಾತ್ರ ಬೆಂಬಲಿಸೋಣ
By Arun Prasad