ಇಂದು (16-07-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಸಾಗರ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಕೊರೊನ ವೈರಸ್ ನಿಯಂತ್ರಣದ ಬಗ್ಗೆ ಅಧಿಕಾರಿಗಳ ಸಭೆ ನೆಡೆಸಿ,
ಹೊರ ಜಿಲ್ಲೆಗಳಿಂದ ಅಗಮಿಸುವವರ ಬಗ್ಗೆ ನಿಗಾ ವಹಿಸುವಂತೆ, ಕಂಟೈನ್ಮೆಂಟ್ ಜೋನ್ ಗಳಲ್ಲಿರುವವರಿಗೆ ತೊಂದರೆಯಾಗದಂತೆ ಅಗತ್ಯ ವಸ್ತುಗಳನ್ನು ಪೂರೈಸುವಂತೆ,
ಗ್ರಾ.ಪಂ ಗಳಿಗೆ ತಾಲ್ಲೂಕು ಹಂತದ ಆಡಳಿತಾಧಿಕಾರಿಗಳ ನೇಮಕವಾಗಿದೆ, ತಮ್ಮ ಇಲಾಖೆ ಕೆಲಸದೊಂದಿಗೆ, ನಿಯೋಜಿಸಿರುವ ಗ್ರಾ.ಪಂ ಗಳಿಗೆ ಭೇಟಿ ನೀಡಿ ಸಲಹೆಗಳನ್ನು ನೀಡಿ ಸಾರ್ವಜನಿಕರ ಕೆಲಸಗಳು, ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು,
ಎಲ್ಲಾ ಇಲಾಖೆಯವರು ಸಹಮತದೊಂದಿಗೆ ಕರ್ತವ್ಯ ನಿರ್ವಹಿಸಿ, ಅನಗತ್ಯವಾಗಿ ಹಾಗೂ ಮಾಸ್ಕ್ ಇಲ್ಲದೆ ಸಂಚರಿಸುವವರು, ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಸುದ್ದಿ ಪ್ರಕಟಿಸುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, EO, THO, ಕೊರೋನ ಕಾರ್ಯಪಡೆ ಯವರು, ಅರಣ್ಯ ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

By Goutham K S, Sagara
