ಹೊಸನಗರ: ಶಾಸಕ ಹರತಾಳು ಹಾಲಪ್ಪ ನವರಿಂದ 12 ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ ವಿತರಣೆ
ಈ ಸಂದರ್ಭದಲ್ಲಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿಗಳು ತಮ್ಮ ಅಧಿಕಾರವಧಿ ಸಂದರ್ಭದಲ್ಲಿ ಪಟ್ಟಣದಲ್ಲಿರುವ ನೀರಿನ ಸೌಲಭ್ಯ ರಸ್ತೆ, ಬೀದಿ ದೀಪ ಮೊದಲಾದ ಪ್ರಾಥಮಿಕ ಸೌಲಭ್ಯಗಳ ಕೊರತೆ ನೀಗಿಸಬೇಕು ಎಂದು ಸದಸ್ಯರುಗಳ ಬೋರ್ಡ್ ಬಂದಲ್ಲಿ ಸರ್ಕಾರದಿಂದ ಬಂದಿರುವ ಅನುದಾನ ಎಲ್ಲಾ ಸದಸ್ಯರುಗಳು ಹಂಚಿಕೊಳ್ಳುವುದರಿಂದ ಯಾವುದೇ ಪೂರ್ಣ ಸೌಲಭ್ಯ ನೀಗಿಸುವಲ್ಲಿ ವಿಫಲರಾಗಬೇಕಾಗುವುದರಿಂದ ಆಡಳಿತಾಧಿಕಾರಿಗಳು ಸಿಬ್ಬಂದಿವರ್ಗದ ಜೊತೆಗೆ ಚರ್ಚಿಸಿ ನಾಗರಿಕರಿಗೆ ಪ್ರಾಥಮಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕೆಂದು ಸಲಹೆ ನೀಡಿದರು.
ಬಸ್ ನಿಲ್ದಾಣದ ಮೇಲ್ಭಾಗದ ಕೊಠಡಿಗಳನ್ನು ರೂಪಾಂತರಗೊಳಿಸಿ ಈಗಾಗಲೇ ಖಾಸಗಿ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಿ ಪ್ರಾರಂಭಿಸುವ ಬಗ್ಗೆ ಚರ್ಚಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಶ್ರೀ ವಿ.ಎಸ್ ರಾಜೀವ್, ತಾಲೂಕು ಪಂಚಾಯತ್ ಅಧ್ಯಕ್ಷ ಆಲುವಳ್ಳಿ ವೀರೇಶ್, ಎಚ್.ಬಿ ಕಲ್ಯಾಣಪ್ಪ ಗೌಡ, ಯುವರಾಜ್, ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸದಸ್ಯರುಗಳು, ಗ್ರಾಮ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.
By Goutham K S, Sagara