ಇಂತಹ ಮಾತುಗಳೇ ನಿರಾಸೆ ಹೊಡೆದೋಡಿಸುವ ಮತ್ತು ಆತ್ಮವಿಶ್ವಾಸ ಹೆಚ್ಚಿಸುವುದು
ಬೆಂಗಳೂರಿಂದ ಬರುವವರಿಗೆ ಹೃದಯಸ್ಪಷಿ೯ ಬೆಂಬಲ ಸಹಕಾರ ನೀಡಿದ ಸಾಗರದ ಶಾಸಕರಾದ ಹರತಾಳುಹಾಲಪ್ಪನವರು
ಮಲೆನಾಡಿನಿಂದ ರಾಜಧಾನಿಗೆ ತಮ್ಮ ಭವಿಷ್ಯ ಹುಡುಕಿ ಹೋಗುವ ಯುವಕ/ಯುವತಿಯರೆಲ್ಲ ನಮ್ಮ ಸಹೋದರ ಸಹೋದರಿಯರೆ, ರೈತರು ಮತ್ತು ಕೃಷಿ ಕಾಮಿ೯ಕ ಕುಟುಂಬದವರೆ.
ಅವರೆಲ್ಲರ ಕನಸು ಹೆತ್ತವರಿಗೆ ಅಥಿ೯ಕ ಸಹಾಯ ಮಾಡಿ ಮನೆಯಲ್ಲಿನ ಕೃಷಿ ಅಭಿವೃದ್ದಿ, ಹೊಸ ಮನೆ ಕಟ್ಟುವುದು, ಸಹೋದರ / ಸಹೋದರಿಯರ ವಿದ್ಯಾಬ್ಯಾಸ ಅವರ ಮದುವೆ, ಮನೇನಲ್ಲಿ ಕಾಯಿಲೆ ಇದ್ದವರಿಗೆ ಚಿಕಿತ್ಸೆ, ಮನೆಯಲ್ಲಿ ಮಾಡಿದ ಬ್ಯಾಂಕ್ ಅಥವ ಖಾಸಾಗಿ ಸಾಲ ತೀರುಸುವುದು ಮತ್ತು ಹಳ್ಳಿಯಲ್ಲಿ ತಮ್ಮ ಕುಟುಂಬಕ್ಕೆ ಒಂದು ಐಡೆಂಟಿಟಿ ಸಿಗುವಂತೆ ಮಾಡುವುದು.
ಆದರೆ ಇದರಲ್ಲಿ ಎಷ್ಟು ಜನ ಯಶಸ್ವಿ ಆಗುತ್ತಾರೆ ಎನ್ನುವುದು ಅವರವರ ಪ್ರಯತ್ನ ಮತ್ತು ಅದೃಷ್ಟದ ಮೇಲೆ ಅವಲಂಬಿಸಿದೆ.
ಈಗ ಬಂದಿರುವ ಕೊರಾನಾ ಗಂಡಾಂತರದಿಂದ ಲಾಕ್ ಡೌನ್ ಗಳಿಂದ ಇಡಿ ರಾಜ್ಯದಲ್ಲಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿಮಾ೯ಣ ಆಗಿದೆ ಇದರಿಂದ ತಾತ್ಕಾಲಿಕವಾಗಿ ಇದು ನಿಯ೦ತ್ರಣಕ್ಕೆ ಬರುವಷ್ಟು ದಿನ ಊರಿಗೆ ಮರಳಿ ಕೃಷಿಯ ಈ ದಿನದಲ್ಲಿ ಮನೆಯವರಿಗೆ ಸಹಕಾರ ಮಾಡುವ ಉದ್ದೇಶ ಮತ್ತು ಮನೆಯವರ ಆತಂಕ ಕಡಿಮೆ ಮಾಡಲಿಕ್ಕಾಗಿ ಊರಿಗೆ ಮರಳುತ್ತಿದ್ದಾರೆ.
ಬೆಂಗಳೂರಿಂದ ಊರಿಗೆ ಬಂದವರು 14 ದಿನ ಸ್ವಯಂ ಕೊರಂಟೈನ್ ನಲ್ಲಿ ಇರಬೇಕು ಎಲ್ಲೂ ಓಡಾಡಬಾರದೆಂಬ ಆರೋಗ್ಯ ಇಲಾಖೆ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಬೇಕು.
ಕೆಲವು ಉಡಾಪೆ ಸ್ವಭಾವದವರು ಈ ಹಿಂದೆ ಊರಿಗೆ ಬಂದಾಗ ಪಾಲಿಸದೆ ಅನೇಕ ಸಮಸ್ಯೆಗೆ ಕಾರಣರಾದ್ದರಿಂದ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಊರಿಗೆ ಬರುವವರ ಮೇಲೆ ಆಯಾ ಹಳ್ಳಿಗಳಲ್ಲಿ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದಭ೯ದಲ್ಲಿ ಸಾಗರದ ಶಾಸಕರು ನೀಡಿದ ಪತ್ರಿಕಾ ಹೇಳಿಕೆ ನಿಜಕ್ಕೂ ಹೃದಯ ಸ್ಪಷಿ೯,ತಾವು ಕೂಡ ಭವಿಷ್ಯ ಹುಡುಕಿ ಬೆಂಗಳೂರಿಗೆ ಹೋಗಿದ್ದು ಅಲ್ಲಿನ ಅನುಭವ ಸ್ವತ: ಹೊಂದಿದ್ದು ಈಗ ಬೆಂಗಳೂರಿಂದ ಊರಿಗೆ ಬರುವವರ ನೋವು ಗೊತ್ತಿರುವುದರಿಂದ ಅವರಿಗೆಲ್ಲ ದೈಯ೯ ನೀಡಿ ಏನೇ ಸಮಸ್ಯೆ ಇದ್ದರೂ ನೇರವಾಗಿ ಸಂಪಕಿ೯ಸಲು ಕೋರಿದ್ದಾರೆ ಅಷ್ಟೆ ಅಲ್ಲ ಸ್ಥಳಿಯರು ಊರಿಗೆ ಬಂದವರನ್ನ ಯಾವುದೇ ಕಾರಣಕ್ಕೂ ಅವರಿಗೆ ನೋವಾಗದಂತೆ ವತಿ೯ಸಲು ಕೂಡ ವಿನಂತಿಸಿರುವುದು ಬೆಂಗಳೂರಿಂದ ತಾತ್ಕಾಲಿಕ ಅನಿವಾಯ೯ದಿಂದ ಬರುವವರಿಗೆ ನಿಜಕ್ಕೂ ಪ್ರೋತ್ಸಾಹದಾಯಕ ಮಾತುಗಳಾಗಿದೆ, ಇದೇ ರೀತಿ ತೀಥ೯ಹಳ್ಳಿ ಶಾಸಕರು ವಿಡಿಯೋ ಒಂದನ್ನ ಮಾಡಿ ಬೆಂಗಳೂರು ವಾಸಿ ಮಲೆನಾಡಿಗರ ಗ್ರೂಪ್ ನಲ್ಲಿ ಹಾಕಿದ್ದಾರೆ.
By Arun Prasad