ಇಂದು (04-06-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ತಾಲ್ಲೂಕು ಹಂತದ ಅಧಿಕಾರಿಗಳ ಸಭೆ ನೆಡೆಸಿ ಇತ್ತಿಚಿನ ದಿನಗಳಲ್ಲಿ ವ್ಯಾಪಕವಾಗಿ ನೆಡೆಯುತ್ತಿರುವ ಅಕ್ರಮ ಮರಗಳ್ಳತನದ ಬಗ್ಗೆ ಆತಂಕ ವ್ಯಕ್ತಪಡಿಸಿ,
ಮಳೆಗಾಲದಲ್ಲಿ ಅರಣ್ಯ ಕಡಿತಲೆ ಮಾಡಿ ಬಾರಿ ವಾಹನಗಳ ಮೂಲಕ ಸಾಗಾಣಿಕೆ ನೆಡೆಯುತ್ತಿದೆ, ಮಳೆಗಾಲದಲ್ಲಿ ಭೂಮಿ ತೇವಾಂಶದಿಂದ ಕೂಡಿದ್ದು, ಬೀಜ ಮೊಳಕೆಯೊಡೆಯುವ ಕಾರಣ ಅರಣ್ಯ ಪರಿಸರ ಹಾಳಾಗುವುದರ ಜೊತೆ ಜೀವ ಜಂತುಗಳಿಗು ತೊಂದರೆಯಾಗುತ್ತದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆಗಳು ಹಾಳಾಗುತ್ತವೆ ತಕ್ಷಣದಿಂದ ಅರಣ್ಯ ಕಡಿತಲೆ ಮತ್ತು ಸಾಗಾಣಿಕೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ,
ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಅರಣ್ಯ ಸಚಿವರಿಗೂ ಮನವರಿಕೆ ಮಾಡಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಕ್ರಮ ಕೈಗೊಳ್ಳುವ ಬಗ್ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿಗಳು, ತಹಶೀಲ್ದಾರರು, DYSP, CPI, ಪೌರಾಯುಕ್ತರು, DFO, E.O, ಲೋಕೋಪಯೋಗಿ, ಜಿ.ಪಂ, ಮೆಸ್ಕಾಂ, ಅಧಿಕಾರಿಗಳು ಉಪಸ್ಥಿತರಿದ್ದರು.
By Goutham K S, Sagara