ಭಾರತದ ರಾಜದಾನಿ ದೆಹಲಿಯಲ್ಲಿ ನಿಯ೦ತ್ರಣಕ್ಕೆ ಬರದ ಕೊರಾನಾ ಅಟ್ಟಹಾಸದ ಕರಾಳ ಛಾಯ.
*ಪ್ರತಿ ದಿನ 1500 ಮೀರಿದ ಪಾಸಿಟೀವ್ ಕೇಸ್ ಗಳು.
- ಹೀಗೆ ಸಾಗಿದರೆ ಜುಲೈ ಕೊನೆಗೆ ಬೇಕಾಗಿದೆ ಒ0ದೂವರೆ ಲಕ್ಷ ಬೆಡ್ ಗಳು. 10- ಜೂನ್ -2020 ರ ಬುಧವಾರ ದೆಹಲಿಯಲ್ಲಿ ಪತ್ತೆ ಆದ ಕೊರಾನಾ ಕೇಸ್ ಗಳಿಂದ ಈವರೆಗೆ ದೆಹಲಿಯಲ್ಲಿ 33 ಸಾವಿರ ಸೋಂಕಿತರ ಸಂಖ್ಯೆ ದಾಟಿದೆ.
ಇಲ್ಲಿಯವರೆಗೆ ದೆಹಲಿಯಲ್ಲಿ ಮೃತರಾದವರ ಸ೦ಖ್ಯೆ 984.
ಇದೇ ರೀತಿ ಕೊರಾನಾ ಹರಡುವುದು ಮು೦ದುವರಿದರೆ ಜುಲೈ ಕೊನೆಗೆ ದೆಹಲಿ ಆಸ್ಪತ್ರೆಗಳಲ್ಲಿ ಬೇಕಾಗುವ ಹೆಚ್ಚುವರಿ ಬೆಡ್ ಗಳ ಸಂಖ್ಯೆ 1.5 ಲಕ್ಷ !?
ದೆಹಲಿಯ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸದೆ ಹೆಚ್ಚು ಬಿಗಡಾಯಿಸುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.
ದೆಹಲಿ ಮುಖ್ಯಮಂತ್ರಿ ಮತ್ತು ಲಿಪ್ಟಿನೆಂಟ್ ಗೌರ್ನರ್ (ರಾಜ್ಯಪಾಲರು) ಬಿನ್ನಾಭಿಪ್ರಾಯ, ಕೇಂದ್ರ ಆಡಳಿತ ಪಕ್ಷದೊಂದಿಗೆ ದೆಹಲಿ ಆಡಳಿತದ ಆಮ್ ಆದ್ಮಿ ಪಕ್ಷದ ತಿಕ್ಕಾಟಗಳು ನಿಯಂತ್ರಣಕ್ಕೆ ಬರದ ರೋಗದ ಜೊತೆ ದೆಹಲಿ ಜನರ ಜೀವದ ಜೊತೆ ಚೆಲ್ಲಾಟ ನಡೆಸಿದೆ.
ಹೀಗಾಗಿಯೆ ದೆಹಲಿ ಮುಖ್ಯಮಂತ್ರಿ ಅಮಿತ್ ಶಾ ಜೊತೆ ಮಾತುಕತೆ ಮಾಡಿದ್ದಾರೆ, ಕೇ೦ದ್ರ ಸಕಾ೯ರ ದೆಹಲಿಯಲ್ಲಿನ ಕೊರಾನಾ ನಿಯ೦ತ್ರಣಕ್ಕೆ ಎಲ್ಲಾ ರೀತಿ ಸಹಕರಿಸುವ ಭರವಸೆ ನೀಡಿದ್ದಾರೆ.
ಈಗಾಗಲೆ ದೆಹಲಿಯಲ್ಲಿ ಕೊರಾನಾ ವೈರಸ್ ಕಮ್ಯುನಿಟಿ ಸ್ತ್ರೆಡಿಂಗ್ ಆಗಿದೆ ಎಂಬ ದೆಹಲಿ ಮಂತ್ರಿಯೊಬ್ಬರ ಹೇಳಿಕೆ ನಿರಾಕರಿಸುವ೦ತಿಲ್ಲ!
ಇದೇ ಪರಿಸ್ಥಿತಿ ದೇಶದಾದ್ಯಂತ ಉ೦ಟಾದರೆ ಜುಲೈ ತಿಂಗಳು ಭಾರತ ದೇಶಕ್ಕೆ ದೊಡ್ಡ ಕಂಟಕವೇ ಉ೦ಟಾಗಲಿದೆ, ಜನತೆ ಮುಂಜಾಗೃತ ಕ್ರಮಗಳನ್ನ ನಿಲ೯ಕ್ಷಿಸುತ್ತಿರುವು ಮತ್ತು ಸಕಾ೯ರಗಳು ಪರೀಕ್ಷೆ ಮತ್ತು ಚಿಕಿತ್ಸೆಗೆ ಅಸಾಧ್ಯ ಎನ್ನುತ್ತಿರುವುದು ಕೂಡ ಆತಂಕದ ವಿಚಾರವೇ ಆಗಿದೆ.
By Arun Prasad