ನೂರು ದಿನದ ಲಾಕ್ ಡೌನ್ ಕೇ೦ದ್ರ ಸಕಾ೯ರದ ಗುರಿ.
“ಮುಂದಿನ 15 ದಿನದಲ್ಲಿ ಇವತ್ತಿನ ರೋಗ ಪೀಡಿತರ ಸಂಖ್ಯೆ ದ್ವಿಗುಣವಾಗದಿದ್ದರೆ ಕೊರಾನಾ ನಿಯOತ್ರಣದಲ್ಲಿ ಇದೆ ಅಂತ ಬಾವಿಸ ಬಹುದಾ? ಎಲ್ಲಾ ಕಟ್ಟುನಿಟ್ಟಿನ ತಪಾಸಣೆ ಕೈಬಿಡುವುದು, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಭರಿಸದಿರುವುದು ಇತ್ಯಾದಿ ಸಕಾ೯ರದ ಕ್ರಮ ಆಶಾದಾಯಕವಲ್ಲ!?”
ಲಾಕ್ ಡೌನ್ 4 ಇವತ್ತಿಗೆ ಮುಗಿದು 5 ಪ್ರಾರಂಭ ಆಗಲಿದೆ, ಇದು ಜೂನ್ 30ರವರೆಗೆ ಮು೦ದುವರಿಯುತ್ತದೆ ಎಂದು ಸುದ್ಧಿ ಇದೆ.
ಮೊದಲ ಲಾಕ್ ಡೌನ್ ಸಂಪೂಣ೯ ಕಪ್ಯೂ೯ ಅಂತ ಇದ್ದದ್ದು ನಂತರ ಹಂತ ಹಂತವಾಗಿ ಸಡಿಲಿಸಲಾಗುತ್ತಾ ಬಂದು ಈಗ 5 ನೇ ಹಂತದ ಲಾಕ್ ಡೌನ್ ಯಾವುದೇ ಪ್ರತಿಬಂದಕಗಳಿಲ್ಲದ ಲಾಕ್ ಡೌನ್ ಆಗಲಿದೆ.
ಎಲ್ಲಾ ಪ್ರಾಥ೯ನ ಮಂದಿರ ಪ್ರಾರಂಭ, ಹೋಟೆಲ್ ಲಾಡ್ಜ್ ಪ್ರಾರಂಭ, ರೈಲು ವಿಮಾನ ಪ್ರಾರಂಭ, ಮಾಲ್ ಗಳು ಪ್ರಾರಂಭ, ತಡೆಹಿಡಿದ SSLC ಮತ್ತು PUC ಪರೀಕ್ಷೆ ಪ್ರಾರಂಭ ಹೀಗೆ ನಿಂತಿದ್ದೆಲ್ಲಾ ಪ್ರಾರಂಭ ಆಗಲಿದೆ.
ಪ್ರತಿ ಜಿಲ್ಲೆಯಲ್ಲಿ ತಪಾಸಣ ಗೇಟ್ಗಳು ಈಗಿಲ್ಲ, ಕೊರಾ೦ಟೈ ಕೇವಲ 7 ದಿನ, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಇನ್ನು ಭರಿಸುವುದಿಲ್ಲ ಎಂದಿದೆ.
ಜೂನ್ 30 ಕ್ಕೆ ಭಾರತ ದೇಶ 100 ದಿನದ ಲಾಕ್ ಡೌನ್ ನಲ್ಲಿ ಏನು ಸಾದಿಸಿತು!? ಎಂಬುದರ ಬಗ್ಗೆ ಹಿಂದೆ ತಿರುಗಿ ನೋಡ ಬೇಕು.
ವಿಶ್ವ ಆರೋಗ್ಯ ಸಂಸ್ಥೆಯ ನೀತಿಯOತೆಯೆ ಲಾಕ್ ಡೌನ್ ತೆರವು ಮಾಡಬೇಕು ಆದರೆ ನಮ್ಮ ದೇಶದಲ್ಲಿ ಕೊರಾನ ನಿಯOತ್ರಣಕ್ಕೆ ಬಂದೇ ಇಲ್ಲ ಹಾಗಾಗಿ ಕೇ೦ದ್ರ ಸಕಾ೯ರ ಲಾಕ್ ಡೌನ್ ಮುಂದುವರಿಸಲಿದೆ.
ಇವತ್ತಿಗೆ ಈ ವೈರಸ್ ಗೆ ಬಲಿ ಆದವರು 5000 ಇವತ್ತಿನ ತನಕದ ಏರುಗತಿಯನ್ನ ವಿಮಶಿ೯ಸಿದರೆ ಮುಂದಿನ15 ದಿನಕ್ಕೆ ಇದು ಡಬಲ್ ಆಗಲಿದೆ.
ಮುಂಬೈ ದೆಹಲಿ ಪರಿಸ್ಥಿತಿ ಸರಿ ಇಲ್ಲ ವಿಶ್ವದಲ್ಲಿ ಭಾರತ ಮೊದಲ 10 ದೇಶದಲ್ಲಿ 9 ರಲ್ಲಿದೆ.
ಕಳೆದ 70 ದಿನದಲ್ಲಿ ಚಿಕಿತ್ಸೆಗಾಗಿ ಸಕಾ೯ರ ದ ತಯಾರಿ ಆಶಾದಾಯಕ ಆಗಿಲ್ಲ, ವೈದ್ಯಕೀಯ ಸಾಮಗ್ರೀ ಖರೀದಿಯಲ್ಲಿ ಬ್ರಷ್ಟಾಚಾರದ ವದಂತಿ ಇದೆ, ಗುಣಮಟ್ಟವಿಲ್ಲ.
ಸಾವ೯ಜನಿಕರಲ್ಲಿ ಸ್ವಯಂ ರೋಗ ಬರದಂತೆ ಜಾಗೃತೆ ವಹಿಸುವವರ ಸಂಖ್ಯೆ ಕೂಡ ಆಶಾದಾಯಕ ಆಗಿಲ್ಲ, ಸಾಮಾಜಿಕ ಅಂತರ ಯಾರೂ ಗಮನ ನೀಡುತ್ತಿಲ್ಲ ಈಗ ದೇವಾಲಯ, ಮಾಲ್, ಹೋಟೆಲ್ ಗಳು ಪ್ರಾರಂಭ ಆದರೆ ಸೋ೦ಕು ಇನ್ನು ಹೆಚ್ಚು ಹರಡುವ ಸಾಧ್ಯತೆ ಇದ್ದರೂ ಸಕಾ೯ರಗಳು ತುತು೯ ಪರಿಸ್ಥಿತಿ ನಿಭಾಯಿಸದೆ ಎಲ್ಲಾ ಕಟ್ಟು ನಿಟ್ಟು ಕ್ರಮ ಸಡಿಲಗೊಳಿಸುತ್ತಿರುವುದು ಮುಂದಿನ ದಿನದಲ್ಲಿ ಅದರ ಪರಿಣಾಮಗಳಿ೦ದಲೇ ಅರಿಯಬೇಕಾಗಿದೆ.
By Arun Prasad