ಕೊರಾನಾ ಲಾಕ್ ಡೌನ್ ಸಂದಭ೯ದಲ್ಲಿ ಇಹಲೋಕ ತ್ಯಜಿಸಿದ ಡಾನ್ ಮುತ್ತಪ್ಪ ರೈ.
ಮುತ್ತಪ್ಪ ರೈ ಬಗ್ಗೆ ಅವರ ಕರಾಳ ಕ್ರೈಮ್ ಲೋಕದ ಬಗ್ಗೆ ದೊಡ್ಡ ಇತಿಹಾಸವೇ ಇದೆ.
ದೇಶ ಬಿಟ್ಟು ಹೋಗಿ ಪುನಃ ದೇಶದ ಕಾನೂನಿಗೆ ತಲೆಬಾಗಿ ಜೈಲು ಸೇರಿ ಎಲ್ಲಾ ಕೇಸ್ ಗೆದ್ದು ಗೌರವಾನ್ವಿತ ಜೀವನದ ವಾಹಿನಿಗೆ ಬಂದರು.
ಇವರಿಗೆ ನಮ್ಮ ದೇಶದ ಗೂಡಚಾರ ಸಂಸ್ಥೆ "ರಾ" ಸಹಾಯ ಮಾಡದಿದ್ದರೆ ಇದು ಸಾಧ್ಯವಿಲ್ಲ ಎಂಬ ವಿಚಾರ ಕೂಡ ಇದೆ.
ಕೇರಳ ಗಡಿ ಸಮೀಪದ ಸಣ್ಣ ಹಳ್ಳಿಯಿ೦ದ ಬೆಂಗಳೂರು ಪಾತಕ ಲೋಕ ಆಳುವವಂತಾದ ಬ್ಯಾಂಕ್ ಒಂದರ ಸಣ್ಣ ನೌಕರನ ಜೀವನ ವೃತ್ತಾಂತ ಕೂತೂಹಲಭರಿತ ಕಥೆ ಆಗಿದೆ.
ನಾಟಿ ಕೋಳಿ ನೀರು ದೊಸೆ, ನಾಗಮಂಡಲ, ಕೋಲಾ, ಕಂಬಳಗಳು, ಹುಟ್ಟೂರಿನ ರಥ ಜಾತ್ರೆ ಹೀಗೆ ತಮ್ಮ ಮೂಲ ರುಚಿ, ಪೂಜೆ, ಆಚರಣೆಗಳನ್ನ ತಪ್ಪದೇ ಪಾಲಿಸುತ್ತಿದ್ದರಂತೆ.
ಕನಾ೯ಟಕದಲ್ಲಿ ಜನ ಸಂಘಟನೆ ಒಂದನ್ನ ಹುಟ್ಟುಹಾಕಿದ್ದಾರೆ ಕೂಡ.
ಕೊರಾನದ ಈ ಕೆಡು ಕಾಲದಲ್ಲಿ ಕ್ಯಾನ್ಸರ್ ನಿOದ ಈಹ ಲೋಕ ತ್ಯಜಿಸಿದ್ದರಿಂದ ರೈ ಅಂತ್ಯ ಕ್ರಿಯೆ ಸರಳವಾಗಿ ಆಯಿತು ಇಲ್ಲದಿದ್ದರೆ ಯಾವ ಸೆಲಬ್ರಿಟಿಗೂ ಕಡಿಮೆ ಇಲ್ಲದ೦ತೆ ನಡೆಯುತ್ತಿತ್ತು.
ಇವರ ಅಜನ್ಮ ಶತೃ ಆಗಿದ್ದ ಒಂದು ಕಾಲದ ಇವರ ಗೆಳೆಯ ಅಗ್ನಿ ಶ್ರೀದರ್ ನಿನ್ನೆ ಟಿವಿ ಸಂದಶ೯ನದಲ್ಲಿ ಹೇಳಿದ ಮಾತು ” ಎಲ್ಲಾ ಡಾನ್ ಗಳ ಸಾವು ದುರಂತದಲ್ಲಿ ಆದರೆ ಮುತ್ತಪ್ಪ ರೈ ಸಾವು ಮಾತ್ರ ಸಹಜ ಸಾವಾಗಿದೆ” ಅಂತ.
ಮುತ್ತಪ್ಪ ರೈ ವೇಷ ಭೂಷಣ, ಪ್ರೆ೦ಚ್ ಗಡ್ಡ, ವಿದೇಶಿ ಕನ್ನಡಕ ಮತ್ತು ದುಬಾರಿ ಕಾರಿನಲ್ಲಿ ಅಂಗರಕ್ಷರ ಪಡೆಯ ಮದ್ಯ ಯಾವಾಗಲೂ ಇರುತ್ತಿದ್ದ ಚಿತ್ರ ನೋಡಿ ಇವರ ಜೀವನದ ಬಗ್ಗೆ ಎಲ್ಲರಿಗೂ ಒಂದು ನಿಗೂಡ ಕುತೂಹಲ ಇದ್ದಿತ್ತು.

By Arun Prasad
