ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ಸಮಥ೯ರಲ್ಲ ವಿನ್ಸ್ಟOಟ ಚಚಿ೯ಲ್.ಇದನ್ನ ನಾವು ಒಪ್ಪಬೇಕಾಗಿಲ್ಲ ಆದರೆ ವಿನಾಶಕಾರಿ ವೈರಸ್ ಒಂದು ಇಡೀ ವಿಶ್ವವನ್ನೇ ಮಸಣ ಮಾಡುತ್ತಿದ್ದರೂ ಅದನ್ನ ಸುಲಭವಾಗಿ ಸ್ವಯಂ ಶುಚಿತ್ವದಿ೦ದ ನಿಯಂತ್ರಿಸಲು ಸಾಧ್ಯವಿದ್ದರೂ ನಾವು ದುರಂಹಕಾರದಿಂದ ಅಂತರ ಕಾಪಾಡದೆ, ಅನಾವಶ್ಯಕ ತಿರುಗಾಟ, ಎಲ್ಲಿ ಬೇಕೆ೦ದರಲ್ಲಿ ಉಗಿಯುವುದು ಇತ್ಯಾದಿ ಬೇಜವಾಬ್ದಾರಿ ನಡತೆ ಇಂದ ಸುಲಭವಾಗಿ ವೈರಸ್ ಹರಡಲು ಕಾರಣರಾಗುವುದು ನೋಡಿದರೆ ಮೇಲಿನ ಚಚಿ೯ಲ್ ರ ಮಾತು ಸತ್ಯ ಅನ್ನಿಸುತ್ತೆ.
ಸಾಮಾಜಿಕ ಅಂತರ ಕಾಪಾಡಲು ಸಕಾ೯ರ, ರಕ್ಷಣಾ ಇಲಾಖೆ ಆರೋಗ್ಯ ಇಲಾಖೆ ಮುಖಾಂತರ 45 ದಿನದಿಂದ ಸತತವಾಗಿ ಪ್ರಯತ್ನ ಪಡುತ್ತಿದ್ದರು ಅದನ್ನ ಅಪಹಾಸ್ಯ ಎಂಬಂತೆ ಪರಸ್ಪರ ಆತುಕೊಂಡು ತರಕಾರಿ, ಮಾಂಸ ಮತ್ತು ಮದ್ಯ ಖರೀದಿಸುವುದು ನಿರಂತರ ಮಾಡುತ್ತಲೇ ಇದ್ದೇವೆ.
144 ಸೆಕ್ಷನ್ ಇದೆ 4 ಜನಕ್ಕಿOತ ಹೆಚ್ಚು ಜನ ಸೇರಬಾರದೆಂಬ ನಿಯಮ ಯಾರೂ ಪಾಲನೆ ಮಾಡುತ್ತಿಲ್ಲ ಹಳ್ಳಿಗಳಲ್ಲಿ ಅಲ್ಲಲ್ಲಿ ಮದುವೆ ಇತ್ಯಾದಿ ನಡೆಯುತ್ತಲೇ ಇದೆ.
ನನ್ನ ಊರ ಸಮೀಪದ ಹಳ್ಳಿಯಲ್ಲಿ ಮದುವೆ ಒಂದಕ್ಕೆ ಹೋಗಿ ಬಂದವರನ್ನ ಕೇಳಿ ನಾನೆ ಹೆದರಿದೆ ಯಾಕೆಂದರೆ ಅಲ್ಲಿ 500ಕ್ಕೂ ಹೆಚ್ಚು ಜನ ಸೇರಿದ್ದರಂತೆ!?
ಶಿವಮೊಗ್ಗ ಜಿಲ್ಲೆ ಪ್ರಾರಂಭದಿಂದ ಇವತ್ತಿನ ವರೆಗೆ ಹಸಿರು ವಲಯದಲ್ಲಿ ಇತ್ತು ಈಗ ಇಲ್ಲ ಯಾಕೆಂದರೆ ಶಿಕಾರಿಪುರದ 8 ಜನ ಮತ್ತು ಹೊಸ ನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಒಬ್ಬರಿಗೆ ಕೊರಾನ ವೈರಸ್ ಸೋ೦ಕು ದೃಡಪಟ್ಟಿದ್ದರಿಂದ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆಂದು ಶಿವಮೊಗ್ಗ ಉಸ್ತುವಾರಿ ಸಚಿವ ಈಶ್ವರಪ್ಪ ಈಗ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದು ಎಲ್ಲರಿಗೂ ಅಘಾತಕಾರಿ ಸುದ್ದಿ ಆಗಿದೆ.
ನಮ್ಮ ಕೈ ನಮ್ಮ ತಲೆಮೇಲೆ
ಎಂಬOತೆ ಇನ್ನಾದರೂ ಜನತೆ ಸ್ವಯ೦ ಪ್ರೇರಣೆಯಿ೦ದ ಕೊರಾನಾ ವೈರಸ್ ನ ವಿರುದ್ಧ ಜಾಗೃತೆ ವಹಿಸದಿದ್ದರೆ ಮುಂದಿನ ದಿನಗಳು ಗಂಡಾ೦ತರಕಾರಿ ಎಂಬುದು ಮರೆಯಬಾರದು.
ನಮ್ಮ ಜೀವಕ್ಕಾಗಿ ಸಕಾ೯ರದ ಯಾವುದೇ ನಿಯಮ ಸರಿ ಇರಲಿ ಬಿಡಲಿ ಕಡ್ಡಾಯವಾಗಿ ಪಾಲಿಸೋಣ, ಅದನ್ನು ಪಾಲಿಸದೆ ಮುಂದಿನ ದಿನದಲ್ಲಿ ಸಮಾಜದಲ್ಲಿ ಅನಾಹುತ ಉoಟಾಗುವ ಸಾಧ್ಯತೆ ಯಾರಿಂದಲೇ ಕಾರಣವಾದರೂ ಅದನ್ನ ತಡೆಯಬೇಕು. ಅವರನ್ನ ಬೆಂಬಲಿಸುವ ಅಥವ ಸಕಾ೯ರವನ್ನು ಗೇಲಿ ಮಾಡುತ್ತಾ ಅಂತವರನ್ನ ಪ್ರೊತ್ಸಾಹಿಸುವ ಕೆಲಸ ಯಾರೇ ಮಾಡಿದರೂ ಕೊರಾನಾ ವೈರಸ್ ಮುಂದೆ ನಮ್ಮನ್ನೆ ಅಪೋಶನ ತೆಗೆದುಕೊಳ್ಳುವ ಅಪಾಯ ಇದೆ ನೆನಪಿರಲಿ.

By Arun Prasad
