ಕರ್ನಾಟಕ ವಿಧಾನ ಪರಿಷತ್ತಿನ ನೂತನ ನಾಮನಿರ್ದೇಶಿತ ಸದಸ್ಯ ಬುಡಕಟ್ಟು ಸಿದ್ದಿ ಜನಾಂಗದ ಶ್ರೀ ಶಾಂತರಾಮ ಸಿದ್ದಿಯವರ ಯಲ್ಲಾಪುರ ಬಳಿಯ ಹಿತ್ಲಳ್ಳಿಯ ಮನೆಗೆ ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಇಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಶಾಂತರಾಮ ಸಿದ್ದಿಯವರ ಮನೆಗೆ ಭೇಟಿ ನೀಡಿದ ಕೋಟ, ಕಾಡು-ಮೇಡು, ಗುಡ್ಡ-ಬೆಟ್ಟಗಳಲ್ಲಿ ಬದುಕಿ ಬಾಳುತ್ತಿರುವ, ಕಾಡಿನ ಮಕ್ಕಳೆಂದೆ ಪರಿಗಣಿಸಲ್ಪಡುತ್ತಿರುವ ವನವಾಸಿಗಳನ್ನು ಒಟ್ಟುಗೂಡಿಸಿ ಆ ಜನಾಂಗದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರ ಭಕ್ತಿ ಮೂಡಿಸುತ್ತಿರುವ ಶ್ರೀ ಶಾಂತರಾಮ ಸಿದ್ದಿಯವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದ್ದು ನಮ್ಮ ಸರ್ಕಾರಕ್ಕೊಂದು ಹೆಮ್ಮೆ ಎಂದು ಪ್ರತಿಕ್ರಯಿಸಿದರು.
ಕಡು ಬಡತನದಲ್ಲಿ ಬದುಕಿ ಬಾಳುತ್ತಿದ್ದ ಶಾಂತರಾಮ ಸಿದ್ದಿಯವರನ್ನು ಶಾಸಕರನ್ನಾಗಿ ಮಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಲ್. ಸಂತೋಷ್, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸಹಿತ, ನಮ್ಮ ಪಾರ್ಟಿಯ ಸರ್ವರು ಅಭಿನಂದನಾರ್ಹರು ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರ್ ಅವರು ಬಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರು, ವನವಾಸಿ ಕಲ್ಯಾಣ ಸಮಿತಿಯ ಸ್ವಯಂ ಸೇವಕರು, ಜಿಲ್ಲಾ, ತಾಲೂಕು , ಗ್ರಾಮ ಪಂಚಾಯತಿ ಸದಸ್ಯರುಗಳು, ಹಾಗೂ ಪಾರ್ಟಿಯ ಅನ್ಯ ಅನ್ಯ ಜವಾಬ್ದಾರಿ ಹೊಂದಿರುವ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
By Goutham K S, Sagara