ಕನ್ನಡ

ವೈ ಎಸ್‌ ವಿವೇಕಾನಂದ ರೆಡ್ಡಿ ಸಾವಿನ ತನಿಖೆ ಸಿಬಿಐ ನಡೆಸಬೇಕು ಎಂದ ವೈಎಸ್‌ಆರ್‌ ಕಾಂಗ್ರೆಸ್‌

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು, ಮಾಜಿ ಮಂತ್ರಿ ಹಾಗೂ ಆಂಧ್ರದ ಮುಖ್ಯಮಂತ್ರಿ ವೈ ಎಸ್‌ ರಾಜಶೇಖರ ರೆಡ್ಡಿ ಅವರ ತಮ್ಮ ವೈ ಎಸ್‌ ವಿವೇಕಾನಂದ ರೆಡ್ಡಿ ಅವರ ಸಾವಿನ ಬಗ್ಗೆ ಕೇಂದ್ರೀಯ ತನಿಖಾ ಆಯೋಗ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಪಡಿಸಿದೆ.

“ಆಂಧ್ರ ಪ್ರದೇಶ ಸರ್ಕಾರವು ಎಸ್‌ಐಟಿ ತನಿಖೆಗೆ ಆದೇಶಿಸಿದೆ. ಈ ತನಿಖೆಯು ನಿಷ್ಪಕ್ಷಪಾತವಾಗಿರುವುದಿಲ್ಲ. ವೈಎಸ್‌ಆರ್‌ ಕುಟುಂಬದವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.

ವೈ ಎಸ್‌ ವಿವೇಕಾನಂದ ರೆಡ್ಡಿ ಅವರು ಇಂದು ಮುಂಜಾನೆ ಹೃದಯ ಸ್ತಂಭನಕ್ಕೆ ತುತ್ತಾಗಿ ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿರುವ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದರು.

ಹಿಂದೆ ವೈ ಎಸ್‌ ರಾಜಶೇಖರ ರೆಡ್ಡಿ ಹೆಲಿಕಾಪ್ಟರ್‌ ದುರ್ಘಟನೆಯಲ್ಲಿ ಸತ್ತುಹೋದರು, ಆಂಧ್ರ ಪ್ರದೇಶದ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ವೈ ಎಸ್‌ ಜಗನ್ಮೋಹನ್‌ ರೆಡ್ಡಿ ಅವರ ಮೇಲೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಹಲ್ಲೆ ನಡೆಸಲಾಗಿತ್ತು.

Click to comment

Leave a Reply

Your e-mail address will not be published. Required fields are marked *

19 − seventeen =

To Top
WhatsApp WhatsApp us