ಕನ್ನಡ

“ನಿಮ್ಮ ಫೋನ್‌ನಲ್ಲಿ ನನ್ನ ಸಂಖ್ಯೆ ಉಳಿಸಿಕೊಳ್ಳಿ” ಎಂದು ಮಾಯಾವತಿಗೆ ಸಲಹೆ ನೀಡಿದ ಉಮಾ ಭಾರತಿ

“ನಿಮ್ಮ ಪೋನ್‌ನಲ್ಲಿ ನನ್ನ ಮೊಬೈಲ್‌ ಸಂಖ್ಯೆ ಉಳಿಸಿಕೊಳ್ಳಿ” ಎಂದು ಕೇಂದ್ರೀಯ ಮಂತ್ರಿ ಉಮಾ ಭಾರತಿ ಅವರು ಬಹುಜನ್‌ ಸಮಾಜ್‌ ಪಕ್ಷದ ಅ‍ಧ್ಯಕ್ಷೆ ಮಾಯಾವತಿಗೆ ಕಿವಿಮಾತು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯಿದೆ ಎಂದು ಮಾಯಾವತಿ ನಂಬಿದ್ದಾರೆ.

೧೯೯೫ರ ಜೂನ್‌ ೨ರಂದು ಮಾಯಾವತಿ ಲಖನೌ ಅತಿಥಿ ಗೃಹವೊಂದರಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಸಮಾಜವಾದಿ ಪಕ್ಷದ ಕಾರ್ಯಕರ್ತರು ಅತಿಥಿ ಗೃಹದೊಳಗೆ ನುಗ್ಗಿ ಮಾಯಾವತಿ ಮೇಲೆ ಹಲ್ಲೆ ನಡೆಸಿದರು.

ಆಗ ಭಾರತೀಯ ಜನತಾ ಪಕ್ಷದ ಶಾಸಕ ಬ್ರಹ್ಮ ದತ್‌ ದ್ವಿವೇದಿ ಮಧ್ಯ ಪ್ರವೇಶಿಸಿ ಮಾಯಾವತಿ ಅವರನ್ನು ರಕ್ಷಿಸುವಲ್ಲಿ ಸಫಲರಾದರು.

ಇದರ ಹಿನ್ನೆಲೆ, ಸಮಾಜವಾದಿ ಪಕ್ಷ ಮತ್ತು ಬಹುಜನ್‌ ಸಮಾಜ ಪಕ್ಷ ೧೯೯೫ರಲ್ಲಿ ಮೈತ್ರಿ ಸರ್ಕಾರ ರಚಿಸಿತ್ತು. ಮುಲಾಯಂ ಸಿಂಗ್‌ ಯಾದವ್‌ ಮುಖ್ಯಮಂತ್ರಿಯಾಗಿದ್ದರು. ಎರಡು ವರ್ಷಗಳಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಸಮಾಜವಾದಿ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡು ಭಾರತೀಯ ಜನತಾ ಪಕ್ಷದೊಂದಿಗೆ ಸರ್ಕಾರ ರಚಿಸಲು ತೀರ್ಮಾನಿಸಿತು. ಸಮಾಜವಾದಿ ಪಕ್ಷದ ಕಾರ್ಯಕರ್ತರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯನ್ನು ಉಲ್ಲೇಖಿಸಿ ಉಮಾ ಭಾರತಿ ಅವರು ಮಾಯಾವತಿ ಅವರಿಗೆ ಸಲಹೆ ನೀಡಿದರು.

ಮುಂಬರುವ ಲೋಕ ಸಭಾ ಚುನಾವಣೆಗಳಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ.

Click to comment

Leave a Reply

Your e-mail address will not be published. Required fields are marked *

nine − six =

To Top
WhatsApp WhatsApp us