ಕನ್ನಡ

ವಡಕ್ಕನ್‌ ದೊಡ್ಡ ಮುಖಂಡನೇನಲ್ಲ ಎಂದ ರಾಹುಲ್‌

ವಡಕ್ಕನ್‌ ದೊಡ್ಡ ಮುಖಂಡನೇನಲ್ಲ ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾನೆ.

ಥಾಮಸ್‌ ವಡಕ್ಕನ್‌ ನಿನ್ನೆ ಕಾಂಗ್ರೆಸ್‌ ತೊರೆದು, ಕೇಂದ್ರೀಯ ಮಂತ್ರಿ ರವಿ ಶಂಕರ್‌ ಪರಸಾದ್‌ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರಿದರು.

ಈ ವಿಚಾರದಲ್ಲಿ ಮೌನ ಮುರಿದ ರಾಹುಲ್‌, ವಡಕ್ಕನ್‌ ದೊಡ್ಡ ಮುಖಂಡನೇನಲ್ಲ ಎಂದು ಹೇಳಿದ್ದಾನೆ.

ಒಂದು ಕಾಲದಲ್ಲಿ ಥಾಮಸ್‌ ವಡಕ್ಕನ್‌ ನೆಹರೂ-ಘಾಂಡಿ ಕುಟುಂಬಕ್ಕೆ ನಿಕಟ ಸಂಬಂಧ ಹೊಂದಿದ್ದರು.

ಕಾಂಗ್ರೆಸ್‌ ಪಕ್ಷವು “ಬಳಸಿ ಬಿಸಾಡು” ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ. ಸ್ವಾಭಿಮಾನ ಇರುವವರಿಗೆ ಕಾಂಗ್ರೆಸ್‌ ಪಕ್ಷವು ಸೂಕ್ತವಲ್ಲ ಎಂದು ವಡಕ್ಕನ್‌ ಹೇಳಿದರು.

“ಪುಲ್ವಾಮಾದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಕೃತ್ಯವನ್ನು ಇಡೀ ದೇಶವು ಖಂಡಿಸಿದ್ದರೆ, ಕಾಂಗ್ರೆಸ್‌ ಪಕ್ಷವು ಪುಲ್ವಾಮಾ ಭಯೋತ್ಪಾದಕರನ್ನು ಕಟುವಾಗಿ ಟೀಕಿಸಲೇ ಇಲ್ಲ. ಕಾಂಗ್ರೆಸ್‌ ಭಾರತೀಯ ಸೇನಾ ಪಡೆಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದೆ. ಅದಕ್ಕಾಗಿಯೇ ನಾನು ಭಾರತೀಯ ಜನತಾ ಪಕ್ಷ ಸೇರಿದ್ದೇನೆ” ಎಂದು ವಡಕ್ಕನ್‌ ಹೇಳಿದರು.

“ಸಿದ್ಧಾಂತದ ಪ್ರಶ್ನಯಲ್ಲ. ರಾಜಕೀಯ ಪಕ್ಷವು ರಾಷ್ಟ್ರವಿರೋಧಿ ನಿಲುವು ತಾಳಿದರೆ ಪಕ್ಷವನ್ನು ತೊರೆಯುವುದು ಅನಿವಾರ್ಯ” ಎಂದು ವಡಕ್ಕನ್‌ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು.

Click to comment

Leave a Reply

Your e-mail address will not be published. Required fields are marked *

11 + 11 =

To Top
WhatsApp WhatsApp us