ಗುಜ್ ಹಲಸು, ಜೀವ್ ಹಲಸು, ಜೀ ಗುಜ್, ಬೇರ್ ಹಲಸು, ನೀರ್ ಹಲಸು ಮತ್ತು ದೀವ್ ಹಲಸು ಅಂತ ವಿವಿದ ನಾಮಾವಳಿಯ ಈ ಹಲಸಿನಿಂದ ವಿವಿದ ಖಾದ್ಯ ಮಾಡುತ್ತಾರೆ.
ನನಗೆ ಇದು ತುಂಬಾ ಇಷ್ಟ ಪ್ರತಿ ವರ್ಷ ಶಿವಮೊಗ್ಗದಿಂದ ಪ್ರಕೃತಿ ಮುದ್ರಣದ ಪಿ.ಪುಟ್ಟಯ್ಯ ಅವರ ಮನೆಯ ಮರದಿಂದ ತೆಗೆದದ್ದು ಕಳಿಸಿ ಕೊಡುತ್ತಾರೆ.
ಹಾಗೆ ನಮ್ಮ ಊರಿನ ಮಾರುತಿ ಇಂಡಸ್ಟ್ರೀಸ್ ಮಾಲಿಕರಾದ ಪೂವಪ್ಪನವರು ಪ್ರತಿ ವಷ೯ ಅವರು ಬೆಳೆಸಿದ ಮರದಿಂದ ಕಿತ್ತು ಕಳಿಸುತ್ತಾರೆ.
ಈ ಬಾರಿ ಲಾಕ್ ಡೌನ್ ನಲ್ಲಿ ಇದರಿಂದ ಅನೇಕ ರೀತಿ ಖಾದ್ಯ ತಯಾರಿಸಿ ತಿಂದರೂ ಹೆಚ್ಚು ನೆನಪಲ್ಲಿ ಉಳಿಯುವುದು ಇದರ ಸ್ಲೈಸ್ ಕಟ್ ಮಾಡಿ ಮೆಣಸಿನ ಪುಡಿ, ಹುಣಿಸೇ ಹುಳಿ ಮತ್ತು ಉಪ್ಪಿನ ಮಸಾಲೆಯಲ್ಲಿ ಹಚ್ಚಿಟ್ಟು ನಂತರ ತವಾದಲ್ಲಿ ಹುರಿದರೆ ಅಂಜಲ್ ಮೀನಿನ ಫ್ರೈ ಮೀರಿಸುವಂತ ಖಾದ್ಯ ತಯಾರಾಗುತ್ತದೆ ಇದು ಈ ಜೀ ಹಲಸಿನ ವಿಶೇಷತೆ.
By Arun Prasad